alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಸೆಡ್ಡು ಹೊಡೆಯಲು ಮತ್ತೊಂದು ಬಂಪರ್ ಕೊಡುಗೆ ನೀಡಿದ ಏರ್ಟೆಲ್

ಗ್ರಾಹಕರನ್ನು ಸೆಳೆಯಲು ಜಿಯೋ ಹಾಗೂ ಏರ್ಟೆಲ್ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದ್ದು, ಇದರ ಲಾಭ ಬಳಕೆದಾರರಾಗುತ್ತಿದೆ. ಟೆಲಿಕಾಂ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳೊಂದಿಗೆ ಎಂಟ್ರಿ ಕೊಟ್ಟ ರಿಲಯನ್ಸ್ ಜಿಯೋ ಪೈಪೋಟಿಯನ್ನೆದುರಿಸಲು ಇತರೆ ಟೆಲಿಕಾಂ ಕಂಪನಿಗಳೂ ಹಲವು ಆಫರ್ ಘೋಷಿಸುತ್ತಿವೆ.

ರಿಲಯೆನ್ಸ್ ಜಿಯೋಗೆ ಪೈಪೋಟಿ ನೀಡಲು ಕೆಲ ದಿನಗಳ ಹಿಂದಷ್ಟೇ ಭಾರೀ ಪ್ಲಾನ್ ಘೋಷಿಸಿದ್ದ ಏರ್ಟೆಲ್ ಇದಕ್ಕೆ ಸ್ಪರ್ಧೆ ನೀಡಲು ಗಣರಾಜ್ಯೋತ್ಸವ ಕೊಡುಗೆ ಹೆಸರಿನಲ್ಲಿ ಜಿಯೋ ಮತ್ತೊಂದು ಆಫರ್ ಘೋಷಿಸುತ್ತಿದ್ದಂತೆಯೇ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ.

ಈ ಹಿಂದೆ 149 ಪ್ಲಾನ್ ನಲ್ಲಿ 28 ದಿನಗಳ ಕಾಲ ಅನಿಯಮಿತ ಕಾಲ್, ಎಸ್ಎಂಎಸ್ ಹಾಗೂ 1 ಜಿಬಿ ಡೇಟಾ ನೀಡುವುದಾಗಿ ಹೇಳಿದ್ದ ಏರ್ಟೆಲ್, ಈಗ ಇದೇ ಪ್ಲಾನ್ ನಡಿಯಲ್ಲಿ ಪ್ರತಿ ದಿನ 1 ಜಿಬಿ ಡೇಟಾ ನೀಡುವುದಾಗಿ ಘೋಷಿಸಿದೆ. ಎಂದಿನಂತೆ ಅನಿಯಮಿತ ಕಾಲ್ ಹಾಗೂ ಎಸ್ಎಂಎಸ್ ಸೌಲಭ್ಯ ಮುಂದುವರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...