alex Certify
ಕನ್ನಡ ದುನಿಯಾ       Mobile App
       

Kannada Duniya

399 ರೂ. 6 ತಿಂಗಳ ಪ್ಲಾನ್ ನಲ್ಲಿ ಏರ್ಟೆಲ್ ನೀಡ್ತಿದೆ 300 ರೂ. ರಿಯಾಯಿತಿ

ಕಳೆದ ತಿಂಗಳು ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ವೋಡಾಫೋನ್ ಹಾಗೂ ಐಡಿಯಾ ಒಂದಾಗಿದೆ. ಇದೀಗ ಭಾರತದಲ್ಲಿ ದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ. ವೋಡಾಫೋನ್ ಲಿಮಿಟೆಡ್ ಇಂಡಿಯಾ, ಏರ್ಟೆಲ್ ಗೆ ಹೊಡೆತ ನೀಡಿದೆ. 15 ವರ್ಷಗಳ ನಂತ್ರ ಏರ್ಟೆಲ್ ನಂಬರ್ ಒನ್ ಸ್ಥಾನದಿಂದ ಕೆಳಗಿಳಿಯಬೇಕಾಗಿದೆ.

ಗ್ರಾಹಕರನ್ನು ತನ್ನತ್ತ ಸೆಳೆಯಲು ಏರ್ಟೆಲ್ ಹೊಸ ಹೊಸ ಪ್ಲಾನ್ ಶುರು ಮಾಡ್ತಿದೆ. 399 ರೂಪಾಯಿ  ಪೋಸ್ಟ್ ಪೇಯ್ಡ್ ಪ್ಲಾನ್ ಗೆ ಏರ್ಟೆಲ್ 50 ರೂಪಾಯಿ ರಿಯಾಯಿತಿ ನೀಡ್ತಿದೆ. ಇನ್ಮುಂದೆ 399 ರೂಪಾಯಿ ಪ್ಲಾನ್ ಗ್ರಾಹಕರಿಗೆ 349 ರೂಪಾಯಿಗೆ ಲಭ್ಯವಾಗಲಿದೆ. ಈ ಪ್ಲಾನ್ 6 ತಿಂಗಳವರೆಗಿರಲಿದೆ. ಒಟ್ಟಾರೆ 6 ತಿಂಗಳ ಕಾಲ ಗ್ರಾಹಕರಿಗೆ 300 ರೂಪಾಯಿ ರಿಯಾಯಿತಿ ಈ ಪ್ಲಾನ್ ನಲ್ಲಿ ಸಿಗಲಿದೆ.

ಈ ಪ್ಲಾನ್ ನಲ್ಲಿ ಏರ್ಟೆಲ್ 20 ಜಿಬಿ ಡೇಟಾ ನೀಡ್ತಿದೆ. ಇದನ್ನು ಮುಂದಿನ ತಿಂಗಳು ವರ್ಗಾವಣೆ ಮಾಡಬಹುದಾಗಿದೆ. ತಿಂಗಳ ಡೇಟಾ ಹಾಗೂ ಪ್ಲಾನ್ ಡೇಟಾ ಸೇರಿಸಿದ್ರೆ ಒಟ್ಟು 40 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಇದು ವೋಡಾಫೋನ್ ರೆಡ್ ಪೋಸ್ಟ್ ಪೇಯ್ಡ್ ಪ್ಲಾನ್ ಗೆ ಟಕ್ಕರ್ ನೀಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...