alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ನೌಕರಿ ಬಿಡಲು ಮುಂದಾಗ್ತಾರೆ ಭಾರತೀಯರು

download

ಭಾರತ ಮುಂದುವರೆಯುತ್ತಿದೆ. ಇಲ್ಲಿನ ಪರಿಸರ ಹಾಗೂ ಹೊಸ ಹೊಸ ಯೋಜನೆಗಳು ಜನರ ಕನಸನ್ನು ಬದಲಾಯಿಸುತ್ತಿವೆ. ಸದ್ಯ ನಡೆದ ಅಧ್ಯಯನವೊಂದು ಇದಕ್ಕೆ ಪುಷ್ಠಿ ನೀಡುತ್ತದೆ. ಭಾರತೀಯರಿಗೆ ನೌಕರಿಗಿಂತ ಉದ್ಯಮದ ಮೇಲೆ ಹೆಚ್ಚು ಒಲವು ಎಂಬುದನ್ನು ಸರ್ವೆ ದೃಢಪಡಿಸಿದೆ. ಅರ್ಧಕ್ಕಿಂತ ಹೆಚ್ಚು ಅಂದ್ರೆ ಶೇಕಡಾ 56ರಷ್ಟು ಉದ್ಯೋಗಿಗಳು ಕೆಲಸ ಬಿಟ್ಟು ಸ್ವಂತ ಉದ್ಯೋಗ ಶುರುಮಾಡುವ ಇಚ್ಛೆ ಹೊಂದಿದ್ದಾರಂತೆ. Randstad Workmonitor ಸರ್ವೆಯಲ್ಲಿ ಈ ವಿಷಯ ಹೊರಬಿದ್ದಿದೆ.

ಸರ್ವೆ ಪ್ರಕಾರ, ಶೇಕಡಾ 83ರಷ್ಟು ಉದ್ಯೋಗಿಗಳು ಉದ್ಯಮಿಯಾಗುವ ಆಸೆ ಹೊಂದಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಸರಾಸರಿ ಶೇಕಡಾ 56ರಷ್ಟು ಭಾರತೀಯರು ಉದ್ಯಮಿಯಾಗುವ ಇಚ್ಛೆ ಹೊಂದಿರುತ್ತಾರೆಂದು ಸರ್ವೆ ಹೇಳಿದೆ. ಎಫ್ ಡಿ ಐ ಗಡಿ ಹೆಚ್ಚಳವಾಗಿರುವುದು, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಇವೆಲ್ಲವೂ ಮಾರುಕಟ್ಟೆ ಸುಧಾರಣೆಗೆ ನೆರವಾಗಿದ್ದು, ಈ ಎಲ್ಲ ಅಂಶಗಳೂ ಉದ್ಯಮಿ ಆಸೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

ಸರ್ವೆ ಪ್ರಕಾರ, 45-54 ವರ್ಷ ವಯಸ್ಸಿನ ಶೇಕಡಾ 37 ರಷ್ಟು ಮಂದಿ ಸ್ವಂತ ಉದ್ಯಮ ಶುರುಮಾಡುವ ಇಚ್ಛೆ ಹೊಂದಿದ್ದಾರೆ. 25-30 ವಯಸ್ಸಿನ ಶೇಕಡಾ 72ರಷ್ಟು ಮಂದಿ ಹಾಗೂ 35-44 ವರ್ಷ ವಯಸ್ಸಿನ ಶೇಕಡಾ 61ರಷ್ಟು ಮಂದಿ ಸ್ವಂತ ಉದ್ಯೋಗದ ಕನಸು ಕಾಣ್ತಿದ್ದಾರೆ. ಸರ್ವೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇಕಡಾ 84ರಷ್ಟು ಮಂದಿ ಭಾರತದಲ್ಲಿ ಉದ್ಯಮ ಪ್ರಾರಂಭಿಸಲು ಒಳ್ಳೆ ವಾತಾವರಣವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...