alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಡೌನ್ ಆದ್ರೂ ಒಂದೇ ದಿನ ಸೆಂಡ್ ಆಯ್ತು 75 ಸಾವಿರ ಕೋಟಿ ಸಂದೇಶ

ಹೊಸ ವರ್ಷ 2018 ರ ಮೊದಲ ದಿನ ಬೆಳಿಗ್ಗೆ ನಿಮ್ಮ ಮೊಬೈಲ್ ನಲ್ಲಿ ಹೊಸ ವರ್ಷದ ಶುಭಾಷಯ ಎಂಬ ಸಂದೇಶ ತುಂಬಿರಬಹುದು. ವಾಟ್ಸಾಪ್ ನಲ್ಲಿ ಬಂದ ಹ್ಯಾಪಿ ನ್ಯೂ ಇಯರ್ ಫೋಟೋ ನೋಡಿ ಸುಸ್ತಾಗಿರ್ತೀರಾ. ಮಾಹಿತಿ ಪ್ರಕಾರ ಈ ವರ್ಷ 7500 ಕೋಟಿ ಸಂದೇಶ ವಾಟ್ಸಾಪ್ ಮೂಲಕ ರವಾನೆಯಾಗಿದೆಯಂತೆ.

ಹೊಸ ವರ್ಷದಂದು ಒಂದು ಕೋಟಿಗೂ ಹೆಚ್ಚು ಜನ ಫೇಸ್ಬುಕ್ ಲೈವ್ ನಲ್ಲಿ ಹ್ಯಾಪಿ ನ್ಯೂ ಇಯರ್ ವಿಶ್ ಮಾಡಿದ್ದಾರಂತೆ. ಫೇಸ್ಬುಕ್ ತನ್ನ ಬ್ಲಾಗ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಶೇಕಡಾ 47ರಷ್ಟು ಫೇಸ್ಬುಕ್ ಲೈವ್ ಹೆಚ್ಚಾಗಿದೆ ಎಂದು ಬ್ಲಾಗ್ ನಲ್ಲಿ ತಿಳಿಸಲಾಗಿದೆ.

ವರದಿ ಪ್ರಕಾರ, ಒಂದೇ ದಿನ ಇಷ್ಟೊಂದು ಸಂದೇಶವನ್ನು ವಾಟ್ಸಾಪ್ ನಲ್ಲಿ ಕಳುಹಿಸಲಾಗಿದೆ. 2016ರ ಜನವರಿ 1ರಂದು 63 ಸಾವಿರ ಕೋಟಿ ವಾಟ್ಸಾಪ್ ಸಂದೇಶ ರವಾನೆಯಾಗಿತ್ತು. 2018ರಲ್ಲಿ 75 ಸಾವಿರ ಕೋಟಿ ವಾಟ್ಸಾಪ್ ಸಂದೇಶ ರವಾನೆಯಾಗಿದೆ. ಇದ್ರಲ್ಲಿ 1300 ಕೋಟಿ ಫೋಟೋ ಹಾಗೂ 500 ಕೋಟಿ ವಿಡಿಯೋ ಎಂದು ಮೂಲಗಳು ಹೇಳಿವೆ.

ಹೊಸ ವರ್ಷದ ಮಧ್ಯರಾತ್ರಿ ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ವಾಟ್ಸಾಪ್ ಡೌನ್ ಆಗಿತ್ತು. ಇದ್ರಿಂದಾಗಿ ಸಂದೇಶ ರವಾನೆ ಮಾಡಲು ಜನರು ಕಿರಿಕಿರಿ ಅನುಭವಿಸಿದ್ರು. ಎರಡು ಗಂಟೆ ನಂತ್ರ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...