alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೆ 5 ಗಂಟೆ ಮೊಬೈಲ್ ಬಳಸುವವರ ಸಂಖ್ಯೆ ಎಷ್ಟು ಗೊತ್ತಾ?

ಸ್ಮಾರ್ಟ್ ಫೋನ್ ನಮ್ಮ ಬದುಕನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಸ್ಮಾರ್ಟ್ ಫೋನ್ ಇಲ್ಲದೇ ಇದ್ರೆ ಜೀವನವೇ ಇಲ್ಲ ಎಂಬಂತಾಗಿದೆ ಎಲ್ಲರ ಸ್ಥಿತಿ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ ಜಗತ್ತಿನ ಶೇ.50ರಷ್ಟು ಜನರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ.

ಆಘಾತಕಾರಿ ವಿಷಯ ಅಂದ್ರೆ ಎಲ್ಲರೂ ಪ್ರತಿದಿನ 5 ಗಂಟೆಗಳ ಕಾಲ ಮೊಬೈಲ್ ಬಳಸುತ್ತಿದ್ದಾರೆ. ನಾಲ್ವರಲ್ಲಿ ಒಬ್ಬರಂತೂ ದಿನದ 7 ಗಂಟೆಗಳ ಕಾಲ ಮೊಬೈಲ್ ಯೂಸ್ ಮಾಡುತ್ತಿದ್ದಾರೆ. ಒಂದು ಗಂಟೆಗಿಂತ್ಲೂ ಕಡಿಮೆ ಅವಧಿ ಮೊಬೈಲ್ ಬಳಸುವವರ ಸಂಖ್ಯೆ ಶೇ.1ರಷ್ಟಿದೆ.

ಶೇ.20ರಷ್ಟು ಜನರು 1-3 ಗಂಟೆಗಳ ಕಾಲ, ಶೇ.29ರಷ್ಟು ಮಂದಿ 3-5 ಗಂಟೆಗಳ ಕಾಲ, ಶೇ.21ರಷ್ಟು ಮಂದಿ 5-7 ಗಂಟೆ ಮೊಬೈಲ್ ಬಳಸುತ್ತಿದ್ದಾರೆ. 7 ಗಂಟೆಗಿಂತ್ಲೂ ಅಧಿಕ ಸಮಯ ಮೊಬೈಲ್ ಬಳಸುವವರ ಸಂಖ್ಯೆ ಶೇ.26ರಷ್ಟಿದೆ. ಈ ಬೆಳವಣಿಗೆ ನಿಜಕ್ಕೂ ಅಪಾಯಕಾರಿ ಎನ್ನುತ್ತಾರೆ ಸಂಶೋಧಕರು.

ಅಭಿವೃದ್ಧಿ ಹೊಂದಿದ ದೇಶಕ್ಕಿಂತ್ಲೂ ಹೆಚ್ಚಾಗಿ ಭಾರತದಂತಹ ರಾಷ್ಟ್ರಗಳಲ್ಲೇ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿದೆ. ಬಳಕೆದಾರರಲ್ಲಿ ಶೇ.64ರಷ್ಟು ಜನರು ಇಂಟರ್ನೆಟ್ ಬ್ರೌಸಿಂಗ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಶೇ.62ರಷ್ಟು ಬಳಕೆದಾರರು ಗೇಮ್ ಹುಚ್ಚಿಗೆ ಬಿದ್ದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...