alex Certify
ಕನ್ನಡ ದುನಿಯಾ       Mobile App
       

Kannada Duniya

GST ಬಳಿಕ ಸೇವಾ ಶುಲ್ಕ ಪಾವತಿಸಿಲ್ಲ ಶೇ.30 ರಷ್ಟು ಗ್ರಾಹಕರು

ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಸೇವಾ ಶುಲ್ಕ ಕಡ್ಡಾಯವಲ್ಲ ಅನ್ನೋ ಸರ್ಕಾರದ ಹೊಸ ನಿಯಮದಿಂದ ಬದಲಾವಣೆಯ ಗಾಳಿ ಬೀಸಿದೆ. ಜಿಎಸ್ಟಿ ಜಾರಿ ನಂತರ ಶೇ.30ರಷ್ಟು ಗ್ರಾಹಕರು ಸೇವಾ ಶುಲ್ಕವನ್ನು ಪಾವತಿಸಿಲ್ಲ. ಆನ್ ಲೈನ್ ಸಮೀಕ್ಷೆಯೊಂದರಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಆದ್ರೆ ಶೇ.21ರಷ್ಟು ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಬಿಲ್ ನಲ್ಲಿ ಸೇವಾ ಶುಲ್ಕವನ್ನು ಪ್ರತ್ಯೇಕವಾಗಿ ನಮೂದಿಸುತ್ತಿಲ್ಲ. ಶೇ.9ರಷ್ಟು ಹೋಟೆಲ್ ಗಳಲ್ಲಿ ಸೇವಾ ಶುಲ್ಕವನ್ನು ಬಿಲ್ ನಿಂದ್ಲೇ ತೆಗೆದುಹಾಕಲಾಗಿದೆ. ಲೋಕಲ್ ಸರ್ಕಲ್ಸ್ ಅನ್ನೋ ಆನ್ ಲೈನ್ ಸೋಶಿಯಲ್ ಮೀಡಿಯಾ ವೇದಿಕೆ ಈ ಬಗ್ಗೆ ಸಮೀಕ್ಷೆ ನಡೆಸಿದೆ.

8500 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಗ್ರಾಹಕರು ಸೇವಾ ಶುಲ್ಕ  ಪಾವತಿಸುವುದು ಕಡ್ಡಾಯವಲ್ಲ, ಗ್ರಾಹಕರು ಇಚ್ಛಿಸಿದಲ್ಲಿ ಸರ್ವೀಸ್ ಚಾರ್ಜ್ ಕೊಡಬಹುದು. ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕರನ್ನು ಒತ್ತಾಯಿಸುವಂತಿಲ್ಲ ಅಂತಾ ಸರ್ಕಾರ ಆದೇಶಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...