alex Certify
ಕನ್ನಡ ದುನಿಯಾ       Mobile App
       

Kannada Duniya

ದಸರಾ, ದೀಪಾವಳಿ ಬಂಪರ್- 10 ದಿನ ಬ್ಯಾಂಕ್ ಗಳಿಗೆ ರಜೆ

28_09_2016-bank-close

ಈ ತಿಂಗಳು ಮುಗೀತು. ಇನ್ನೊಂದೆ ದಿನ ಇದೆ. ಅಕ್ಟೋಬರ್ ನಲ್ಲಿ ಬ್ಯಾಂಕ್ ಕೆಲಸ ಮಾಡಿಕೊಂಡ್ರಾಯ್ತು ಅಂತಾ ಪ್ಲಾನ್ ಹಾಕಿದ್ರೆ ಸ್ವಲ್ಪ ಕ್ಯಾಲೆಂಡರ್ ಕಡೆ ಗಮನ ನೀಡಿ. ಮುಂದಿನ ತಿಂಗಳು ಬ್ಯಾಂಕ್ ಗೆ ಹೋಗುವ ಮುನ್ನ ಯಾವ್ಯಾವಾಗ ರಜೆ ಇದೆ ಅನ್ನೋದನ್ನು ತಿಳಿದುಕೊಂಡು ಹೋಗಿ. ಯಾಕೆಂದ್ರೆ ಮುಂದಿನ ತಿಂಗಳು ಬ್ಯಾಂಕ್ ಬರೋಬ್ಬರಿ 10 ದಿನ ಬಾಗಿಲು ಮುಚ್ಚಲಿದೆ.

ಹಬ್ಬದ ಮೇಲೆ ಹಬ್ಬ ಬಂದಿರುವುದೇ ಇದಕ್ಕೆ ಕಾರಣ. ಅಕ್ಟೋಬರ್ 8 ಎರಡನೇ ಶನಿವಾರ. 9 ಭಾನುವಾರ. 10 ಹಾಗೂ 11 ದಸರಾ ರಜೆ. ನಂತ್ರ ಅಕ್ಟೋಬರ್ 12 ರಂದು ಮೊಹರಂ. ಅಕ್ಟೋಬರ್ 30 ಹಾಗೂ 31ರಂದು ದೀಪಾವಳಿ ರಜೆ. ತಿಂಗಳ ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಬಂದ್. ರಜೆ ಪಟ್ಟಿಯಲ್ಲಿ ಭಾನುವಾರವನ್ನೂ ಸೇರ್ಪಡೆ ಮಾಡಿದ್ರೆ ಮುಂದಿನ ತಿಂಗಳು 10 ದಿನಗಳ ಕಾಲ ಬ್ಯಾಂಕ್ ಬಾಗಿಲು ತೆರೆಯೋದಿಲ್ಲ. ಅಕ್ಟೋಬರ್ 2 ಭಾನುವಾರ ಬಂದಿರೋದ್ರಿಂದ ಈ ರಜೆಯೊಂದು ಉಳಿದಿದೆ.

ಕರ್ನಾಟಕದಲ್ಲಿ  ಅಕ್ಟೋಬರ್ 2, 10, 11, 12, 15, 29 ಮತ್ತು ಅಕ್ಟೋಬರ್ 31 ರಂದು ಬ್ಯಾಂಕ್ ಗಳಿಗೆ ರಜೆ ಇರಲಿದೆ. ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 2, 10, 11, 12, 30 ಮತ್ತು 31 ರಂದು ಬ್ಯಾಂಕ್ ಮುಚ್ಚಲಿದೆ. ದೆಹಲಿಯಲ್ಲಿ 2, 11, 12 ಮತ್ತು 30 ರಂದು ಬ್ಯಾಂಕ್ ಗಳು ಕೆಲಸ ಮಾಡುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...