alex Certify
ಕನ್ನಡ ದುನಿಯಾ       Mobile App
       

Kannada Duniya

ಈದ್ ಗಿಂತ ಮೊದಲೇ ಬಿಡುಗಡೆಯಾಯ್ತು ‘ಝೀರೋ’ ಟೀಸರ್

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಝೀರೋ’ದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ತುಂಬಾ ರೋಮಾಂಚಕವಾಗಿದೆ. ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ಶಾರುಕ್ ಖಾನ್ ಕಾಣಿಸಿಕೊಂಡಿದ್ದಾರೆ. ಟೀಸರ್ ಕೊನೆಯಲ್ಲಿ ಶಾರುಕ್ ಜೊತೆ ಸಲ್ಮಾನ್ ಕಾಣಿಸಿಕೊಂಡು ಚಕಿತಗೊಳಿಸ್ತಾರೆ.

ಒಂದು ನಿಮಿಷ 21 ಸೆಕೆಂಡಿನ ಈ ಟೀಸರ್ ನ ಕೊನೆಯಲ್ಲಿ ಶಾರುಕ್ ರನ್ನು ಸಲ್ಮಾನ್ ಎತ್ತಿಕೊಂಡಿದ್ದಾರೆ. ಚಿತ್ರವನ್ನು ಆನಂದ್ ಎಲ್ ರಾಯ್ ನಿರ್ದೇಶಿಸಿದ್ದಾರೆ. ಶಾರುಕ್ ಝೀರೋ ಚಿತ್ರ ಡಿಸೆಂಬರ್ 21ರಂದು ಕ್ರಿಸ್ಮಸ್ ಸಂದರ್ಭದಲ್ಲಿ ತೆರೆಗೆ ಬರಲಿದೆ. ಹಿಂದಿನ ವರ್ಷ ಕ್ರಿಸ್ಮಸ್ ನಲ್ಲಿ ಸಲ್ಮಾನ್ ಅಭಿನಯದ ಟೈಗರ್ ಜಿಂದಾ ಹೇ ತೆರೆಗೆ ಬಂದಿತ್ತು. ಈ ಬಾರಿ ಶಾರುಕ್ ಸರದಿ.

ಶಾರುಕ್ ಖಾನ್ ಜೊತೆ ನಟಿ ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಕತ್ರಿನಾ ಹಾಗೂ ಅನುಷ್ಕಾ ಜೊತೆ ಜಬ್ ತಕ್ ಹೇ ಜಾನ್ ಚಿತ್ರದಲ್ಲಿ ಶಾರುಕ್ ನಟಿಸಿದ್ದರು. ಝಿರೋ ಮೇಲೆ ನಿರೀಕ್ಷೆ ಹೆಚ್ಚಿದ್ದು, ಚಿತ್ರ ಯಾವ ಮಟ್ಟಿಗೆ ಗಳಿಕೆ ಕಾಣಲಿದೆ ಎಂಬುದನ್ನು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...