alex Certify
ಕನ್ನಡ ದುನಿಯಾ       Mobile App
       

Kannada Duniya

“ಝೈರಾ ಹೇಳಿಕೆ ಪಬ್ಲಿಸಿಟಿ ಸ್ಟಂಟ್’’

ದಂಗಲ್ ನಟಿ ಝೈರಾ ವಾಸಿಂರಿಗೆ ವಿಮಾನದಲ್ಲಿ ಕಿರುಕುಳ ನೀಡಿದ್ದ ಆರೋಪದ ಮೇಲೆ ಬಂಧಿಯಾಗಿರುವ ವಿಕಾಸ್ ಸಚ್ ದೇವ್ ಪತ್ನಿ ದಿವ್ಯಾ ಸಚ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ. ಝೈರಾ ಹೇಳಿಕೆ ಪಬ್ಲಿಸಿಟಿ ಸ್ಟಂಟ್ ಎಂದು ದಿವ್ಯಾ ಸಚ್ ದೇವ್ ಹೇಳಿದ್ದಾರೆ.

ಸ್ಪಾಟ್ಬಾಯ್ ಡಾಟ್ ಕಾಂ ಜೊತೆ ಮಾತನಾಡಿದ ದಿವ್ಯಾ ಈ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪತಿ ಚಿಕ್ಕಪ್ಪನ ಅಂತಿಮ ಸಂಸ್ಕಾರಕ್ಕೆ ಹೋಗಿದ್ದರು. ಅವರು ತುಂಬಾ ದುಃಖದಲ್ಲಿದ್ದರು. ಮಾನಸಿಕ ಸ್ಥಿತಿ ಉತ್ತಮವಾಗಿರಲಿಲ್ಲ. ದೆಹಲಿಯಿಂದ ಮುಂಬೈಗೆ ಬರ್ತಿದ್ದ ಅವರು ನಿದ್ರೆ ಮಾಡಲು ಬಯಸಿದ್ದರು. ಇದಕ್ಕಾಗಿ ಕಂಬಳಿ ಕೇಳಿದ್ದರು. ಆದ್ರೆ ಝೈರಾ ನನ್ನ ಪತಿ ಮೇಲೆ ಹೊರಿಸಿರುವ ಆರೋಪ ಕೇಳಿ ನಾನು ಆಶ್ಚರ್ಯಗೊಂಡಿದ್ದೇನೆ. ಈಗ ಪೊಲೀಸರು ನನ್ನ ಗಂಡನನ್ನು ಬಂಧಿಸಿದ್ದಾರೆ. ಝೈರಾ ಘಟನೆ ನಡೆದ ತಕ್ಷಣ ಯಾಕೆ ಈ ವಿಷ್ಯವನ್ನು ಹೇಳಲಿಲ್ಲ. ಎರಡು ಗಂಟೆ ನಂತ್ರ ಏಕೆ ಟ್ವೀಟರ್ ಮಾಡಿದ್ಲು ಎಂಬುದು ನನ್ನ ಪ್ರಶ್ನೆ ಎಂದಿದ್ದಾರೆ ದಿವ್ಯಾ.

ಝೈರಾ ಜೊತೆ ಅವರ ತಾಯಿಯಿದ್ರು. ಘಟನೆ ನಡೆದ ತಕ್ಷಣ ಏಕೆ ಗಲಾಟೆ ಮಾಡಲಿಲ್ಲ ಎಂದು ದಿವ್ಯಾ ಪ್ರಶ್ನೆ ಮಾಡಿದ್ದಾರೆ. ಇಷ್ಟೇ ಅಲ್ಲ ನನ್ನ ಪತಿ ಗೌರವಾನ್ವಿತ ಕುಟುಂಬದಿಂದ ಬಂದವರು. ನಮಗೆ 9 ವರ್ಷದ ಮಗನಿದ್ದಾನೆ. ಪತಿ ಎಂದೂ ಇಂಥ ಕೆಲಸ ಮಾಡುವುದಿಲ್ಲವೆಂದು ದಿವ್ಯ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...