alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಕ್ ದೇ’ ಬೆಡಗಿ ಜೊತೆ ಜಹೀರ್ ಖಾನ್ ಡೇಟಿಂಗ್….

zaheer_khan_and_sagarika_3

ಕ್ರಿಕೆಟಿಗ ಯುವರಾಜ್ ಸಿಂಗ್ ಮದುವೆಗೆ ವಿರಾಟ್ ಕೊಹ್ಲಿ ತಮ್ಮ ಲೇಡಿ ಲವ್  ಅನುಷ್ಕಾ ಶರ್ಮಾ ಜೊತೆ ಬಿಂದಾಸ್ ಆಗಿ ಬಂದಿದ್ರು. ಅವರನ್ನು ಬಿಟ್ರೆ ಎಲ್ಲರ ಗಮನ ಸೆಳೆದ ಜೋಡಿ ಅಂದ್ರೆ ಜಹೀರ್ ಖಾನ್ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ.

ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಜಹೀರ್, ಕಳೆದ 4 ತಿಂಗಳುಗಳಿಂದ ‘ಚಕ್ ದೇ ಇಂಡಿಯಾ’ ಚಿತ್ರದ ಬೆಡಗಿ ಸಾಗರಿಕಾ ಜೊತೆ ಡೇಟಿಂಗ್ ನಡೆಸ್ತಿದ್ದಾರೆ.

ಪಾರ್ಟಿ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ಆದ್ರೆ ತಮ್ಮ ಲವ್ ಅಫೇರ್ ಬಗ್ಗೆ ಅವರು ಎಲ್ಲೂ ಮಾತನಾಡಿಲ್ಲ. ಯುವಿ ಮದುವೆಗೂ ಜೋಡಿಯಾಗಿ ಬಂದಿದ್ದು ನೋಡಿದ್ರೆ ಜಹೀರ್-ಸಾಗರಿಕಾ ಮಧ್ಯೆ ಕುಛ್ ಕುಛ್ ನಡೀತಿದೆ ಅಂತಾನೇ ಎಲ್ರೂ ಮಾತನಾಡಿಕೊಳ್ತಿದ್ದಾರೆ. ಇದಕ್ಕೂ ಮೊದಲು ಬಾಲಿವುಡ್ ನಟಿ ಇಶಾ ಶರ್ವಾಣಿ ಜೊತೆ ಜಹೀರ್ ಹೆಸರು ಕೇಳಿಬಂದಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...