alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಪತ್ನಿಗೆ ಇರಿಸುಮುರಿಸು ಉಂಟು ಮಾಡಿದ ಯೂಟ್ಯೂಬ್ ಸ್ಟಾರ್

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಯಾವ ವಿಚಾರಕ್ಕೆ ವಿರೋಧವನ್ನು ಎದುರಿಸಬೇಕಾಗುತ್ತೆ ಅನ್ನೋದು ಗೊತ್ತೇ ಆಗೋದಿಲ್ಲ. ಒಂದು ಸಾಮಾನ್ಯ ಫೋಟೋಗೆ ಕೂಡ ಕೆಲ ಪುಂಡ ಟ್ವಿಟ್ಟರಿಗರಿಂದ ಸೆಲೆಬ್ರಿಟಿಗಳಿಗೆ ಇರಿಸುಮುರಿಸು ಉಂಟಾಗಬಹುದು. ಇಂತದ್ದೇ ಪರಿಸ್ಥಿತಿಯನ್ನು ಈಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಎದುರಿಸಿದ್ದಾರೆ.

ಇತ್ತೀಚೆಗಷ್ಟೆ ಅನುಷ್ಕಾ ಶರ್ಮಾ ತಮ್ಮ ಐಫೋನ್ ಮೂಲಕ ಶ್ವಾನವೊಂದರ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಲುಕ್ ಎಟ್ ದಿಸ್ ಬ್ಯೂಟಿಫುಲ್ ಬಾಯ್ ಅನ್ನೋ ಕ್ಯಾಪ್ಷನ್ ಕೂಡ ನೀಡಿದ್ದರು. ಆದ್ರೆ ಇದಕ್ಕೆ ಯೂಟ್ಯೂಬ್ ಸ್ಟಾರ್ ಮರ್ಕ್ಯೂ ಬ್ರೌನ್ಲೇ ಎಂಬಾತ ಆಕ್ಷೇಪ ವ್ಯಕ್ತಪಡಿಸಿದ್ದಾನೆ.

ಫೋಟೋವನ್ನು ಅನುಷ್ಕಾ ತಮ್ಮ ಐಫೋನ್ ಮೂಲಕ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಅನುಷ್ಕಾ ಕೆಲ ಗೂಗಲ್ ಹ್ಯಾಷ್ಟ್ಯಾಗ್ ಬಳಸಿದ್ದಾರೆ. ಆ ಹ್ಯಾಷ್ ಟ್ಯಾಗ್ಗಳನ್ನ ಅನುಷ್ಕಾ ಪ್ರಮೋಟ್ ಮಾಡ್ತಿದ್ದಾರೆ ಅಂತ ಬ್ರೌನ್ಲೇ ಆಕ್ಷೇಪ ವ್ಯಕ್ತಪಡಿಸಿ ಹಲವು ಟ್ವೀಟ್ ಗಳನ್ನ ಮಾಡಿದ್ದಾನೆ.

ಆತನ ಸರಣಿ ಟ್ವೀಟ್ ಬಗ್ಗೆ ಇರಿಸುಮುರಿಸುಗೊಂಡ ಅನುಷ್ಕಾ ಮತ್ತು ಅವರ ಫಾಲೋವರ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವರು ಆತನನ್ನು ಬ್ಲಾಕ್ ಮಾಡುವುದಾಗಿ ಎಚ್ಚರಿಸಿದ್ದಾರೆ. ಆದ್ರೆ ಅನುಷ್ಕಾ ಶರ್ಮಾ ಮಾತ್ರ ಆತನನ್ನ ನೆಗ್ಲೆಟ್ ಮಾಡಿ ಅನ್ನೋ ಅರ್ಥದಲ್ಲಿ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...