alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರಾ ಖಾನ್ ಅಫೇರ್ ಸುದ್ದಿ ಹಬ್ಬಿಸಿದ್ಯಾರು ಗೊತ್ತಾ..?

sara-ali-khan

ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಇದುವರೆಗೂ ಬಾಲಿವುಡ್ ನಲ್ಲಿ ಯಾವ ಸಿನೆಮಾಕ್ಕೂ ಸಹಿ ಹಾಕಿಲ್ಲ. ಆದ್ರೆ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿದ್ದಾಳೆ. ಸಾರಾ ಹಾಗೂ ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ಕಪೂರ್ ಮಧ್ಯೆ ಕುಚ್ ಕುಚ್ ನಡೀತಾ ಇದೆ ಅನ್ನೋದು ಸದ್ಯ ಬಾಲಿವುಡ್ ನ ಹಾಟ್ ನ್ಯೂಸ್.

ಇಬ್ಬರೂ ದುಬಾರಿ ಹೋಟೆಲ್ ಒಂದರಲ್ಲಿ ಜೊತೆಯಾಗಿ ಲಂಚ್ ಡೇಟ್ ಗೆ ಹೋಗಿರೋ ಫೋಟೋ ಕೂಡ ವೈರಲ್ ಆಗಿತ್ತು. ನಿಜಕ್ಕೂ ಅವರಿಬ್ಬರ ಮಧ್ಯೆ ಏನಾದ್ರೂ ಶುರುವಾಗಿದ್ಯೋ ಇಲ್ವೋ ಗೊತ್ತಿಲ್ಲ, ಆದ್ರೆ ಗುಸು ಗುಸು ಮಾತ್ರ ಕೇಳಿಬರ್ತಾ ಇದೆ. ಅಷ್ಟಕ್ಕೂ ಈ ಸುದ್ದಿ ಹಬ್ಬಿಸ್ತಾ ಇರೋರು ಯಾರ್ ಗೊತ್ತಾ?

ಸಾರಾಳ ಮಲತಾಯಿ, ಸೈಫ್ ಪತ್ನಿ ಕರೀನಾ ಕಪೂರ್. ಕರೀನಾ ಹಾಗೂ ರಣಬೀರ್ ಕಪೂರ್ ಬಾಲಿವುಡ್ ನ ಬಿಬಿಸಿ ಅಂತಾನೇ ಫೇಮಸ್ ಆಗಿದ್ದಾರೆ. ಬಾಲಿವುಡ್ ಮಂದಿ ಬಗ್ಗೆ ಗಾಸಿಪ್ ಮಾಡೋದ್ರಲ್ಲಿ ಇಬ್ಬರೂ ಎತ್ತಿದ ಕೈ ಅಂತಾ ನಿರ್ದೇಶಕ ಕರಣ್ ಜೋಹರ್ ಬಹಿರಂಗಪಡಿಸಿದ್ರು.

ಈಗ ಸಾರಾ ಹಾಗೂ ಹರ್ಷವರ್ಧನ್ ಮಧ್ಯೆ ಅಫೇರ್ ಇದೆ ಅನ್ನೋ ಗಾಸಿಪ್ ಅನ್ನು ಕೂಡ ಅವರೇ ಹುಟ್ಟುಹಾಕಿದ್ದಾರಂತೆ. ಸಿನಿಮಾ ಮಂದಿಯ ಸುದ್ದಿಯನ್ನೆಲ್ಲ ಬೇಬೋ, ರಣಬೀರ್ ಕಿವಿಗೆ ಹಾಕ್ತಾಳಂತೆ. ಅದನ್ನು ಎಲ್ಲಾ ಕಡೆ ಹಬ್ಬಿಸೋ ಕೆಲಸ ರಣಬೀರ್ ಕಪೂರ್ ದು. ಅದೇನೇ ಆದ್ರೂ ಸೈಫ್ ಮಗಳ ಬಗ್ಗೆಯೇ ಕರೀನಾ ಈ ರೀತಿ ಸುದ್ದಿ ಹಬ್ಬಿಸ್ತಾ ಇರೋದು ಅಚ್ಚರಿ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...