alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಲ್ಕಿ ಬ್ಯೂಟಿಯ ಮೇಕಪ್ ಗೆ ಅಭಿಮಾನಿಗಳು ಫುಲ್ ಫಿದಾ

ತಮನ್ನಾ ಬಾಟಿಯಾ….ದಕ್ಷಿಣ ಭಾರತ ಹೆಸರಾಂತ ನಟಿ. ಮಿಲ್ಕಿ ಬ್ಯೂಟಿ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಳ್ಳೋ ತಮನ್ನಾ ಇದೀಗ ಕ್ವೀನ್ ಆಗೋಕೆ ಹೊರಟಿದ್ದಾಳೆ.

ಹೌದು, ಹಿಂದಿಯ ಕ್ವೀನ್ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲಾಗ್ತಿದ್ದು, ಅಲ್ಲಿ ಕಂಗನಾ ಮಾಡಿದ ಪಾತ್ರವನ್ನ, ತೆಲುಗಿನಲ್ಲಿ ತಮನ್ನಾ ಮಾಡಲಿದ್ದಾರೆ. ಟಾಲಿವುಡ್ ನಲ್ಲಿ ಬಾಹುಬಲಿ, ದೇವಿಯಂತ ಚಿತ್ರಗಳಲ್ಲಿ ನಟಿಸಿ, ಖ್ಯಾತಿ ಪಡೆದಿರುವ ತಮನ್ನಾ, ಬಾಲಿವುಡ್ ನಲ್ಲೂ ಎಂಟರ್ ಟೈನ್ಮೆಂಟ್, ಹಿಮ್ಮತ್ ವಾಲಾ ಮತ್ತು ಹಮ್ ಷಕಲ್ ಚಿತ್ರದ ಮೂಲಕ  ಅಷ್ಟೇ ಪಾಪ್ಯುಲರ್ ಆಗಿದ್ದಾರೆ.

ಹೀಗಾಗಿ ತಮನ್ನಾಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಇನ್ನು ಇನ್ಸ್ಟಾಗ್ರಾಂ ನಲ್ಲಿ  ಈ ಮಿಲ್ಕಿ ಬ್ಯೂಟಿಗೆ ಸರಿ ಸುಮಾರು 5.6 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಈ ಮಿಲ್ಕಿ ಬ್ಯೂಟಿ ಮೊನ್ನೆಯಷ್ಟೇ ರಾಜಧಾನಿಗೆ ಬಂದಿದ್ರು. ಆದ್ರೆ ಅಂದು ತಮನ್ನಾ ಎಂದಿನಂತಿರಲಿಲ್ಲ. ಫುಲ್ ಡಿಫರೆಂಟ್ ಲುಕ್ ನಲ್ಲಿ ಕಂಗೊಳಿಸುತ್ತಿದ್ರು. ಸ್ವರೋಕಿ ಜ್ಯೂವೆಲ್ಲರಿ ಬ್ರ್ಯಾಂಡ್ ಲಾಂಚ್ ಗೆ ಬಂದಿದ್ದ ತಮನ್ನಾ, ಸಿಲವರ್ ಕಲರ್ ಪ್ಯಾಂಟ್ ಸೂಟ್, ಲೈಟ್ ಮೇಕಪ್, ಡಾರ್ಕ್ ಲಿಪ್ ಸ್ಟಿಕ್  ಹಾಕಿಕೊಂಡಿದ್ರು. ಇದ್ರಿಂದಾಗಿ ಅವರ ಅಭಿಮಾನಿಗಳೇ ಅವರನ್ನ ಗುರುತು ಹಿಡಿಯದಂತಾಗಿತ್ತು…!

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...