alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ಬಳಿಕ ಸಲ್ಮಾನ್ ಜೊತೆ ಬಹಿರಂಗವಾಗಿ ಕಾಣಿಸಿಕೊಂಡ ಕತ್ರೀನಾ

IndiaTv42de9e_salman_katrina_bigg_boss9

ದೀರ್ಘ ಕಾಲದಿಂದ ಜೊತೆಗಿದ್ದ ರಣಬೀರ್- ಕತ್ರೀನಾ ಜೋಡಿ ಈಗ ಅಧಿಕೃತವಾಗಿ ಬೇರ್ಪಟ್ಟಿದೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಜೊತೆಗೆ ಕತ್ರೀನಾ ರಾತ್ರೋರಾತ್ರಿ ತನ್ನ ಮಾಜಿ ಪ್ರಿಯಕರ ಸಲ್ಮಾನ್ ಭೇಟಿ ಮಾಡಿದ್ದೂ ಕುತೂಹಲಕ್ಕೆ ಕಾರಣವಾಗಿತ್ತು.

ಬ್ರೇಕ್ ಅಪ್ ಬಳಿಕ ಕತ್ರೀನಾ ಕೈಫ್ ಇದೇ ಮೊದಲ ಬಾರಿಗೆ ಸಲ್ಮಾನ್ ಜೊತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂಬರುವ ‘ಫಿತುರ್’ ಚಿತ್ರದ ಪ್ರಮೋಷನ್ ಗಾಗಿ ಕತ್ರೀನಾ, ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್’ ವೇದಿಕೆಯಲ್ಲಿ ಸಹ ನಟ ಆದಿತ್ಯ ರಾಯ್ ಕಪೂರ್ ಜೊತೆ ಕತ್ರೀನಾ ಕಾಣಿಸಿಕೊಂಡರು.

ಈ ವೇಳೆ ವ್ಯಾಲೈಂಟಿನ್ಸ್ ಡೇ ಪ್ಲಾನ್ ಬಗ್ಗೆ ಉಳಿದವರ ಬಳಿ ಪ್ರಶ್ನೆ ಕೇಳಿದ ಸಲ್ಮಾನ್ ಖಾನ್, ಕತ್ರೀನಾ ಸರದಿ ಬರುತ್ತಿದ್ದಂತೆಯೇ ‘ಫಿತುರ್’ ಚಿತ್ರದ ವಿಷಯ ಎತ್ತಿಕೊಂಡು ಕತ್ರೀನಾ ಮುಜುಗರಕ್ಕೊಳಗಾಗುವುದನ್ನು ತಪ್ಪಿಸಿದರು. ಜೊತೆಗೆ ಕತ್ರೀನಾ ವೇದಿಕೆಗೆ ಆಗಮಿಸುತ್ತಿದ್ದ ವೇಳೆ ‘ಕತ್ರೀನಾ, ನೀವೊಬ್ಬ ಶಕ್ತಿಶಾಲಿ ಮಹಿಳೆ ಎಂದು ನನಗೆ ಗೊತ್ತು’ ಎಂದು ಹೇಳುವ ಮೂಲಕ ಕತ್ರೀನಾಗೆ ಪರೋಕ್ಷವಾಗಿ ಬೆಂಬಲ ಸೂಚಿಸುವ ಪ್ರಯತ್ನ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...