alex Certify
ಕನ್ನಡ ದುನಿಯಾ       Mobile App
       

Kannada Duniya

6 ವರ್ಷಗಳ ಬಳಿಕ ಒಂದಾಗುತ್ತಿದೆ ಗುರು-ಶಿಷ್ಯರ ಜೋಡಿ

diganth-8

ದಿಗಂತ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಅಂದ್ರೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿರುತ್ತದೆ. 6 ವರ್ಷಗಳ ನಂತರ ಇವರಿಬ್ರೂ ಮತ್ತೆ ಒಂದಾಗ್ತಿದ್ದಾರೆ. ದೂದ್ ಪೇಡ ದಿಗಂತ್ ಗೆ ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ‘ಪಂಚರಂಗಿ’ ಸಿನೆಮಾದ ನಂತರ ಯೋಗರಾಜ್ ಭಟ್ ರ ಯಾವ ಚಿತ್ರದಲ್ಲೂ ದಿಗಂತ್ ನಟಿಸಿರಲಿಲ್ಲ.

ಇದೀಗ ದಿಗಂತ್ ರನ್ನು ನಾಯಕನನ್ನಾಗಿ ಹಾಕಿಕೊಂಡು ಹೊಸ ಚಿತ್ರವೊಂದನ್ನು ಮಾಡಲು ಯೋಗರಾಜ್ ಭಟ್ ತಯಾರಿ ನಡೆಸಿದ್ದಾರೆ. ಈ ಸಿನೆಮಾದಲ್ಲಿ ನಟ ಗಣೇಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಹಿಂದೆ ‘ಗಾಳಿಪಟ’ ಚಿತ್ರದಲ್ಲಿ ಗಣೇಶ್ ಹಾಗೂ ದಿಗಂತ್ ಜೊತೆಯಾಗಿ ನಟಿಸಿದ್ದರು.

ಬಹಳ ವರ್ಷಗಳ ನಂತರ ಯೋಗರಾಜ್ ಭಟ್ ಜೊತೆಗೆ ಕೆಲಸ ಮಾಡಲು ಉತ್ಸುಕನಾಗಿರೋದಾಗಿ ದಿಗಂತ್ ತಿಳಿಸಿದ್ದಾರೆ. ಈ ಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೂಡ ನೀಡಲಿದೆ ಅಂತಾ ಹೇಳಿದ್ದಾರೆ. ಯೋಗರಾಜ್ ಭಟ್ಟರ ‘ಮುಗುಳು ನಗೆ’ ಚಿತ್ರ ಮುಗಿದ ಮೇಲೆ ಈ ಸಿನೆಮಾ ಸೆಟ್ಟೇರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...