alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರ ಪಾಲಾಗಲಿದೆ ‘ಕಿರಾತಕ-2’ ಟೈಟಲ್…?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರ ಎಲ್ಲರಿಗೂ ಗೊತ್ತೇ ಇದೆ. ಅದೇ ಚಿತ್ರದ ಮುಂದುವರಿದ ಭಾಗವಾಗಿ ಯಶ್ ಅಭಿನಯದಲ್ಲೇ ಕಿರಾತಕ-2 ಚಿತ್ರದ ಶೂಟಿಂಗ್ ಕೂಡ ಆರಂಭವಾಗಿದೆ ಎಂಬ ಸುದ್ದಿ ಕೂಡ ಕೇಳಿದ್ದೆವು. ಆದರೀಗ ಈ ಚಿತ್ರದ ಟೈಟಲ್ ವಿವಾದ ಇಬ್ಬರು ನಿರ್ದೇಶಕರ ನಡುವಿನ ಜಗಳಕ್ಕೆ ಕಾರಣವಾಗಿದೆ.

‘ಕಿರಾತಕ’ ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ ‘ಕಿರಾತಕ 2’ ಶೀರ್ಷಿಕೆಯಲ್ಲಿ ಚಿತ್ರವನ್ನು ಆರಂಭಿಸಿದ್ದಾರೆ. ಆದರೆ ನಿರ್ದೇಶಕ ಅನಿಲ್ ಕುಮಾರ್ ನಟ ಯಶ್ ಗೆ ಒಂದು ಸಿನಿಮಾ ಮಾಡುವುದಕ್ಕಾಗಿ ಕಿರಾತಕ-2 ಹೆಸರನ್ನೇ ತಮ್ಮ ಚಿತ್ರಕ್ಕೂ ಫಿಕ್ಸ್ ಮಾಡಿದ್ದಾರೆ.

ನಿರ್ದೇಶಕ ಪ್ರದೀಪ್ ರಾಜ್, ಕಿರಾತಕ ಟೈಟಲ್ ನಮ್ಮದಾಗಿದ್ದು, ಅದೇ ಚಿತ್ರದ ಮುಂದುವರೆದ ಭಾಗವಾಗಿ ಕಿರಾತಕ-2 ಆರಂಭಿಸಿದ್ದು, ಈಗಾಗಲೇ ಚಿತ್ರೀಕರಣ ಕೂಡ ಶುರುವಾಗಿದೆ. ಹೀಗಾಗಿ ಬೇರೆ ನಿರ್ದೇಶಕರಿಗೆ ಈ ಟೈಟಲನ್ನು ಕೊಡುವ ಮಾತೇ ಇಲ್ಲ ಎಂದಿದ್ದಾರೆ. ಇತ್ತ ನಿರ್ದೇಶಕ ಅನಿಲ್ ಕುಮಾರ್ ಕೂಡ ತಮ್ಮ ಚಿತ್ರಕ್ಕೆ ಅದೇ ಟೈಟಲ್ ಫಿಕ್ಸ್ ಮಾಡಿದ್ದು, ಯಶ್ ಕಾಲ್ ಶೀಟ್ ಪಡೆದಿದ್ದಾರೆ.

ಟೈಟಲ್ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರದೀಪ್ ರಾಜ್ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಒಟ್ಟಿನಲ್ಲಿ ಕಿರಾತಕ-2 ಟೈಟಲ್ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...