alex Certify
ಕನ್ನಡ ದುನಿಯಾ       Mobile App
       

Kannada Duniya

ರಾಕಿಂಗ್ ಸ್ಟಾರ್ ಯಶ್ ಕಾರ್ಯಕ್ಕೆ ಹೇಳಿ ಹ್ಯಾಟ್ಸಾಫ್

yash water

ಕನ್ನಡದ ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಕಳಕಳಿಯನ್ನು ತೋರಿದ್ದು, ಬರಗಾಲದಿಂದ ತತ್ತರಿಸಿರುವ ಜನರ ನೆರವಿಗೆ ಧಾವಿಸಿದ್ದಾರೆ. ಬರದ ತೀವ್ರತೆಯಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಿಗದಂತಾಗಿದ್ದು, ಯಶ್ ನೀರು ಪೂರೈಕೆ ಮಾಡಲು ಯೋಜಿಸಿದ್ದಾರೆ.

ಯಶ್, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಜನರಿಗೆ ನೀರು ಪೂರೈಕೆ ಮಾಡಲು ಮುಂದಾಗಿದ್ದಾರೆ. ಈ ಸೇವಾ ಕಾರ್ಯಕ್ಕಾಗಿಯೇ ಆರಂಭಿಸಿರುವ ‘ಯಶೋಮಾರ್ಗ ಫೌಂಡೇಷನ್’ ಮೂಲಕ ಯಶ್, ಕಲಬುರಗಿ ಜಿಲ್ಲೆಗಳ 25 ಹಳ್ಳಿಗಳಿಗೆ ನೀರು ಪೂರೈಕೆಯನ್ನು ಆರಂಭಿಸಿದ್ದಾರೆ. ಶೀಘ್ರವೇ ಯಶ್ ವಿಜಯಪುರ ಜಿಲ್ಲೆಯ 25 ಹಳ್ಳಿಗಳಿಗೆ ನೀರು ಕೊಡಲು ಯೋಜಿಸಿದ್ದಾರೆ. ಯಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ಕುರಿತು ಹೇಳಿಕೊಂಡಿದ್ದು, ಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸರ್ಕಾರ, ಸಂಘ- ಸಂಸ್ಥೆಗಳು ನೊಂದಿರುವ ಜನರಿಗೆ ನೆರವಾಗುತ್ತಿವೆ. ಅಗತ್ಯವಾಗಿರುವ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿವೆ. ಇದೆಲ್ಲಾ ಸರ್ಕಾರದ ಕೆಲಸ ಮಾತ್ರವಲ್ಲ, ನಮ್ಮ ಕೆಲಸ ಕೂಡ ಎಂದು ಭಾವಿಸಿ ‘ಯಶೋಮಾರ್ಗ ಫೌಂಡೇಷನ್’ ಮೂಲಕ ನೊಂದವರಿಗೆ ನೆರವಾಗುವುದಾಗಿ ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...