alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯೂಟಿ ಕ್ವೀನ್ ಜೊತೆ ರಾಕಿಂಗ್ ಸ್ಟಾರ್ ರೋಮ್ಯಾನ್ಸ್

yash

ಯಶ್ ಅಭಿನಯದ ‘ಕೆಜಿಎಫ್’ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಕೊನೆಗೂ ಹಿರೋಯಿನ್ ಆಯ್ಕೆಯಾಗಿದ್ದಾರೆ.

2016 ರ ಮಿಸ್ ಸುಪ್ರಾ ನ್ಯಾಶನಲ್ ಪ್ರಶಸ್ತಿ ವಿಜೇತೆ ಶ್ರೀನಿಧಿ ಶೆಟ್ಟಿ ‘ಕೆಜಿಎಫ್’ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಜನವರಿಯಲ್ಲಿ ಈ ಚಿತ್ರ ಸೆಟ್ಟೇರಲಿದೆ. ತುಂಬಾ ದಿನಗಳಿಂದ ಶ್ರೀನಿಧಿ ಜೊತೆ ಈ ಬಗ್ಗೆ ಮಾತುಕತೆ ನಡೆದಿತ್ತು, ಆದ್ರೆ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಿದ್ರಿಂದ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಕೊನೆಗೂ ಆಕೆ ಒಪ್ಪಿಕೊಂಡಿರೋದು ಖುಷಿ ತಂದಿದೆ ಅಂತಾ ನಿರ್ಮಾಪಕ ಕಾರ್ತಿಕ್ ಗೌಡ ತಿಳಿಸಿದ್ದಾರೆ.

ಶ್ರೀನಿಧಿ ಶೆಟ್ಟಿ, ಯಶ್ ಅಭಿಮಾನಿಯಂತೆ. ಚೊಚ್ಚಲ ಚಿತ್ರದಲ್ಲೇ ಯಶ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದಿದ್ದಾರೆ. ಇಷ್ಟು ದಿನ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಬ್ಯುಸಿಯಾಗಿದ್ದೆ, ಈಗ ಕೆಜಿಎಫ್ ಚಿತ್ರಕ್ಕೆ ಸಹಿ ಮಾಡಿದ್ದೇನೆ ಅಂತಾ ತಿಳಿಸಿದ್ದಾರೆ. ಯಶ್ ನಟನೆಯ ‘ಡ್ರಾಮಾ’, ‘ಮಿಸ್ಟರ್ & ಮಿಸೆಸ್ ರಾಮಾಚಾರಿ’ ಚಿತ್ರಗಳನ್ನು ಶ್ರೀನಿಧಿ ನೋಡಿದ್ದಾರಂತೆ. ಈಗ ಅವರ ಜೊತೆಯೇ ನಟಿಸುತ್ತಿದ್ದೇನೆ ಅನ್ನೋ ಸಂಗತಿಯನ್ನು ನಂಬಲಾಗುತ್ತಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...