alex Certify
ಕನ್ನಡ ದುನಿಯಾ       Mobile App
       

Kannada Duniya

ಯಶ್ ಕುರಿತ ಹೇಳಿಕೆ ಬಗ್ಗೆ ಬಾಯ್ಬಿಟ್ಟ ರಶ್ಮಿಕಾ

rshmik-s-yash-d

ರಾಕಿಂಗ್ ಸ್ಟಾರ್ ಯಶ್ ಅವರ ಕುರಿತಾಗಿ ತಾವು ನೀಡಿದ್ದ ಹೇಳಿಕೆಗೆ ನಟಿ ರಶ್ಮಿಕಾ ಮಂದಣ್ಣ ಕ್ಷಮೆ ಕೋರಿದ್ದಾರೆ. ‘ಯಶ್ ಸರ್ ಅವರನ್ನು ನಾನು ಗೌರವಿಸುತ್ತೇನೆ. ನನ್ನಿಂದ ಆಗಿರುವ ತಪ್ಪಿಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಯಶ್ ಶೋ ಆಫ್ ಎಂದು ಸಂದರ್ಶನವೊಂದರಲ್ಲಿ ರಶ್ಮಿಕಾ ಹೇಳಿದ್ದು, ಯಶ್ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ನಿರ್ದೇಶಕ ಸಂತೋಷ್ ಆನಂದರಾಮನ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.

ಅಲ್ಲದೇ ಯಶ್ ಕೂಡ ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟು ಬಿಡಿ. ಇಲ್ಲಿ ಚರ್ಚಿಸುವಂತದ್ದು ಏನೂ ಇಲ್ಲವೆಂದು ತಿಳಿಸಿದ್ದರು.

ಇದಾದ ಬಳಿಕ ರಶ್ಮಿಕಾ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟಾಕ್ ಶೋಗೆ ಸಂಬಂಧಿಸಿದಂತೆ ನಡೆದ ವಿದ್ಯಮಾನಗಳಿಂದ ಬೇಸರವಾಗಿದೆ. ಯಶ್ ಸರ್ ಅವರನ್ನು ನಾನು ಗೌರವಿಸುತ್ತೇನೆ. ಈ ಹಿಂದೆಯೇ ಅವರ ಬಗ್ಗೆ ನಾನು ಮೆಚ್ಚುಗೆಯ ಮಾತುಗಳನ್ನಾಡಿದ್ದೇನೆ. ಅವರ ಸಾಧನೆ ನಾನು ಸೇರಿದಂತೆ ಅನೇಕರಿಗೆ ಪ್ರೇರಣೆಯಾಗಿದೆ. ನಾನು ನೀಡಿದ ಹೇಳಿಕೆಯಿಂದಾಗಿ ಬೇಸರವಾಗಿದ್ದಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

‘ಕಿರಿಕ್ ಪಾರ್ಟಿ’ ಬಿಡುಗಡೆಗೂ ಮೊದಲಿನ ಸಂದರ್ಶನವನ್ನು ಈಗ ರಿಲೀಸ್ ಮಾಡಿ ವಿವಾದ ಮಾಡಲಾಗಿದೆ. ಅದೇ ಸಂದರ್ಶನದಲ್ಲಿ ನಾನು ಯಶ್ ಅವರ ಸಿನಿಮಾದ ಬಗ್ಗೆ ಹೊಗಳಿ ಮಾತನಾಡಿದ್ದೇನೆ. ಸಂದರ್ಶನದ ಪೂರ್ಣ ಭಾಗವನ್ನು ತೋರಿಸದೇ ಕತ್ತರಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...