alex Certify
ಕನ್ನಡ ದುನಿಯಾ       Mobile App
       

Kannada Duniya

ಶುರುವಾಯ್ತು ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಮದುವೆ ಸಂಭ್ರಮ

yash-rr

ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ಮದುವೆ ಡಿಸೆಂಬರ್ 9 ರಿಂದ 3 ದಿನಗಳ ಕಾಲ ನಡೆಯಲಿದೆ. ಡಿಸೆಂಬರ್ 6 ರಂದು ಖಾಸಗಿ ರೆಸಾರ್ಟ್ ನಲ್ಲಿ ನಡೆದ ಮೆಹಂದಿ, ಸಂಗೀತ್ ಕಾರ್ಯಕ್ರಮದಲ್ಲಿ ಕುಟುಂಬದವರು ಆತ್ಮೀಯರು, ಕಲಾವಿದರು ಪಾಲ್ಗೊಂಡಿದ್ದಾರೆ. ಪ್ರಜ್ವಲ್ ದೇವರಾಜ್, ಪ್ರೇಮ್ ಸೇರಿದಂತೆ ಅನೇಕರು ಯಶ್, ರಾಧಿಕಾ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಯಶ್ ಹಾಗೂ ರಾಧಿಕಾ ಹಲವು ಹಾಡುಗಳಿಗೆ ಸ್ಟೆಪ್ ಹಾಕಿದ್ದು, ವಿಶೇಷವಾಗಿತ್ತು. ಡಿಸೆಂಬರ್ 9 ರಂದು ತಾಜ್ ವೆಸ್ಟೆಂಡ್ ನಲ್ಲಿ ಮದುವೆ ನಡೆಯಲಿದ್ದು, ಕುಟುಂಬದವರು, ಆತ್ಮೀಯ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 10 ರಂದು ಸಂಜೆ ತ್ರಿಪುರವಾಸಿನಿಯಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಬಿಗಿಭದ್ರತೆ ಒದಗಿಸಲಾಗಿದೆ.

ವಿ.ಐ.ಪಿ.ಗಳು, ವಿ.ವಿ.ಐ.ಪಿ.ಗಳು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ 3 ಹಂತದ ಭದ್ರತೆ ಕೈಗೊಳ್ಳಲಾಗಿದೆ. 400 ಪೊಲೀಸರು, 250 ಬೌನ್ಸರ್ ಗಳನ್ನು ನಿಯೋಜಿಸಲಾಗುವುದು. ಅರುಣ್ ಸಾಗರ್ ಕಲ್ಪನೆಯಲ್ಲಿ ಅದ್ಧೂರಿ ಸೆಟ್ ಗಳನ್ನು ಹಾಕಲಾಗಿದ್ದು, ಮಸ್ತಾನ್ ತಂಡದವರು ದೇಶ, ವಿದೇಶದ ಹೂಗಳಿಂದ ಮದುವೆ ಮಂಟಪವನ್ನು ಅಲಂಕೃತಗೊಳಿಸಲಿದ್ದಾರೆ. ಇದರೊಂದಿಗೆ 600 ಅಡುಗೆಯವರು ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಿದ್ದಾರೆ. ಡಿಸೆಂಬರ್ 11 ರಂದು ಅಭಿಮಾನಿಗಳು ಮತ್ತು ಒಕ್ಕೂಟದ ಕಾರ್ಮಿಕರಿಗೆ ಔತಣಕೂಟ ಏರ್ಪಡಿಸಲಾಗಿದೆ.

ಅರಮನೆ ರಸ್ತೆಗಳಲ್ಲಿ ಅಭಿಮಾನಿಗಳು ಈಗಾಗಲೇ ಯಶ್-ರಾಧಿಕಾ ಮದುವೆಗೆ ಶುಭಾಶಯ ಕೋರಿ ಫ್ಲೆಕ್ಸ್ ಗಳನ್ನು ಹಾಕಿದ್ದಾರೆ. ಸ್ಯಾಂಡಲ್ ವುಡ್ ಯಶಸ್ವಿ ಜೋಡಿಗಳಾದ ಯಶ್ ಹಾಗೂ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳು ಮದುವೆ ಸಂಭ್ರಮ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...