alex Certify
ಕನ್ನಡ ದುನಿಯಾ       Mobile App
       

Kannada Duniya

ಅರಮನೆ ಮೈದಾನದಲ್ಲಿ ಯಶ್ ಅಭಿಮಾನಿಗಳ ಸಾಗರ

20161211_152713

ಬೆಂಗಳೂರು: ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಔತಣಕೂಟ ಏರ್ಪಡಿಸಿದ್ದು, 50,000 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ.

ಅಭಿಮಾನಿಗಳಿಗಾಗಿಯೇ ವಿಶೇಷ ಆರತಕ್ಷತೆ ಮತ್ತು ಔತಣ ಕೂಟ ಏರ್ಪಡಿಸಲಾಗಿದೆ. ನೀವು ಪ್ರೀತಿಯಿಂದ ಬಂದು ಹಾರೈಸಿ. ಯಾವುದೇ ಹಾರ, ಉಡುಗೊರೆಗಳನ್ನು ತರಬೇಡಿ ಎಂದು ಯಶ್ ಅಭಿಮಾನಿಗಳಿಗೆ ಹೇಳಿದ್ದರು. ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಅಭಿಮಾನಿಗಳಿಗೆ ಬಗೆ, ಬಗೆಯ ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸಲಾಗಿದ್ದು, ಮಧ್ಯಾಹ್ನದ ವೇಳೆಗೆ ಸುಮಾರು 40 ಸಾವಿರ ಮಂದಿ ಊಟ ಮಾಡಿದ್ದಾರೆ.

ನವದಂಪತಿಗಳನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿದ್ದು, ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ರಾಧಿಕಾ ಯಶ್, ಎಲ್ಲರೂ ತಾಳ್ಮೆಯಿಂದ ಊಟ ಮಾಡಿಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ.

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಯಶ್, ನಿಮಗಾಗಿಯೇ ಈ ಕಾರ್ಯಕ್ರಮ ಏರ್ಪಡಿಸಿದ್ದು, ಎಲ್ಲರೂ ತಾಳ್ಮೆಯಿಂದ ಇರಿ. ಊಟ ಮಾಡಿಕೊಂಡು ಹೋಗಿ ಎಂದು ಹೇಳಿದ್ದಾರೆ. ಕೆಲವರು ಬ್ಯಾರಿಕೇಡ್ ಗಳನ್ನು ಹತ್ತಲು ಮುಂದಾದ ಸಂದರ್ಭದಲ್ಲಿ ಇಳಿಯುವಂತೆ ಸೂಚಿಸಿದ್ದಾರೆ.

ಅಲ್ಲದೇ ಕೆಲವು ಡೈಲಾಗ್ ಗಳನ್ನು ಹೇಳಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಪ್ಪಟ ದೇಸಿ ಸ್ಟೈಲ್ ನಲ್ಲಿ ಕಂಗೊಳಿಸುತ್ತಿದ್ದ ಯಶ್, ರಾಧಿಕಾ ಅವರನ್ನು ಅಸಂಖ್ಯಾತ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...