alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಯಶ್-ರಾಧಿಕಾ ಆರತಕ್ಷತೆ

radhika-yash

ಬೆಂಗಳೂರು: ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ರಿಸೆಪ್ಷನ್ ನಿನ್ನೆ ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅದ್ಧೂರಿಯಾಗಿ ನಡೆಯಿತು.

ಅಪಾರ ಸಂಖ್ಯೆಯ ಗಣ್ಯರು, ಅತಿಥಿಗಳು ಭಾಗವಹಿಸಿದ್ದರು. ಅರುಣ್ ಸಾಗರ್ ಕಲ್ಪನೆಯಲ್ಲಿ ನಿರ್ಮಿಸಿದ್ದ ಅದ್ಧೂರಿ ಸೆಟ್ ನಲ್ಲಿ ನಡೆದ ರಾಯಲ್ ರಿಸೆಪ್ಷನ್ ನಲ್ಲಿ ಯಶ್ ಹಾಗೂ ರಾಧಿಕಾ ಕಂಗೊಳಿಸುತ್ತಿದ್ದರು.

ಭಾನುವಾರ ಅಭಿಮಾನಿಗಳು ಮತ್ತು ಒಕ್ಕೂಟದ ಕಾರ್ಮಿಕರಿಗೆ ಔತಣ ಕೂಟ, ವಿಶೇಷ ಆರತಕ್ಷತೆ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಕಡೆಗಳಿಂದ ಸಹಸ್ರಾರು ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಅಭಿಮಾನಿಗಳಿಗಾಗಿಯೇ ವಿಶೇಷ ತಿಂಡಿ, ತಿನಿಸು, ಭೋಜನ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಂದ ಯಾವುದೇ ಉಡುಗೊರೆ ಸ್ವೀಕರಿಸುವುದಿಲ್ಲ. ಪ್ರೀತಿಯಿಂದ ಬಂದು ಹಾರೈಸಿ ಎಂದು ಯಶ್ ಈಗಾಗಲೇ ಹೇಳಿದ್ದಾರೆ.

ನೆಚ್ಚಿನ ಜೋಡಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬೆಳಿಗ್ಗೆಯಿಂದಲೇ ತ್ರಿಪುರವಾಸಿನಿಯ ಬಳಿ ನೆರೆದಿದ್ದರು. ನೂಕುನುಗ್ಗಲು ಉಂಟಾಗದಂತೆ ಭದ್ರತೆ ವ್ಯವಸ್ಥೆ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...