alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ನಡೆಯುತ್ತೆ ಯಶ್-ರಾಧಿಕಾ ರಾಯಲ್ ರಿಸೆಪ್ಷನ್

sudeep-yash

ಬೆಂಗಳೂರು: ನಿನ್ನೆಯಷ್ಟೇ ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ಪ್ರಕೃತಿಯ ಮಡಿಲಲ್ಲಿ, ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ಅವರ ರಿಸೆಪ್ಷನ್ ಇಂದು ತ್ರಿಪುರವಾಸಿನಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಸಿನಿಮಾ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 3 ಹಂತದ ಭದ್ರತೆ ಕೈಗೊಳ್ಳಲಾಗಿದೆ. 250 ಕ್ಕೂ ಅಧಿಕ ಬೌನ್ಸರ್ ಗಳು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ತಾಜ್ ವೆಸ್ಟೆಂಡ್ ನ ಬಾಣಸಿಗರು ಬಗೆಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಲಿದ್ದಾರೆ.

ಕಲಾ ನಿರ್ದೇಶಕ ಅರುಣ್ ಸಾಗರ್ ಕಲ್ಪನೆಯಲ್ಲಿ ಅದ್ಧೂರಿಯಾದ ಸೆಟ್ ಹಾಕಲಾಗಿದ್ದು, ರಾಯಲ್ ರಿಸೆಪ್ಷನ್ ನಲ್ಲಿ ಗಣ್ಯರ ಸಮಾಗಮ ಆಗಲಿದೆ. ಡಿಸೆಂಬರ್ 11 ರಂದು ಅಭಿಮಾನಿಗಳು ಮತ್ತು ಒಕ್ಕೂಟದ ಕಾರ್ಮಿಕರಿಗೆ ಔತಣಕೂಟ ಏರ್ಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...