alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಸಂಭ್ರಮದಲ್ಲಿ ಯಶ್-ರಾಧಿಕಾ ಪಂಡಿತ್

radhika-pa-y

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ಇಂದು ಬೆಳಿಗ್ಗೆ 11.30 ರಿಂದ 12.30 ರವರೆಗಿನ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ತಾಜ್ ವೆಸ್ಟೆಂಡ್ ನಲ್ಲಿ ಅರುಣ್ ಸಾಗರ್ ಕಲ್ಪನೆಯಲ್ಲಿ ಅದ್ಧೂರಿ ಸೆಟ್ ಗಳನ್ನು ಹಾಕಲಾಗಿದೆ. ಸೋಮನಾಥೇಶ್ವರ ಮಾದರಿಯ ಸೆಟ್ ನಲ್ಲಿ ಯಶ್ ಹಾಗೂ ರಾಧಿಕಾ ಅವರ ಮದುವೆ ನೆರವೇರಲಿದ್ದು, ಕುಟುಂಬದವರು, ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಪ್ರಕೃತಿಯ ನಡುವೆ ಮುಹೂರ್ತ ಧಾರೆ ನಡೆಯಲಿದ್ದು, ವಿಶೇಷವಾದ ಸೆಟ್ ಗಳು ಕಲಾಕೃತಿಗಳಿಂದ ಹೊಸ ಲೋಕವನ್ನೇ ಸೃಷ್ಠಿಸಲಾಗಿದೆ.

ಇಂದಿನಿಂದ 3 ದಿನಗಳ ಕಾಲ ಮದುವೆ ಸಮಾರಂಭ ನಡೆಯಲಿದೆ. ಡಿಸೆಂಬರ್ 6 ರಂದು ಖಾಸಗಿ ರೆಸಾರ್ಟ್ ನಲ್ಲಿ ನಡೆದ ಮೆಹಂದಿ, ಸಂಗೀತ್ ಕಾರ್ಯಕ್ರಮದಲ್ಲಿ ಕುಟುಂಬದವರು ಆತ್ಮೀಯರು, ಕಲಾವಿದರು ಪಾಲ್ಗೊಂಡಿದ್ದರು. ಡಿಸೆಂಬರ್ 10 ರಂದು ಸಂಜೆ ತ್ರಿಪುರವಾಸಿನಿಯಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್ 11 ರಂದು ಅಭಿಮಾನಿಗಳು ಮತ್ತು ಒಕ್ಕೂಟದ ಕಾರ್ಮಿಕರಿಗೆ ಔತಣಕೂಟ ಏರ್ಪಡಿಸಲಾಗಿದೆ. ಯಶ್, ಅಭಿಮಾನಿಗಳನ್ನು ಆಹ್ವಾನಿಸಿದ್ದು, ಡಿಸೆಂಬರ್ 11 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿಮಗಾಗಿ ಹಾಗೂ ಒಕ್ಕೂಟದ ಕಾರ್ಮಿಕರಿಗಾಗಿ ಔತಣಕೂಟ ಏರ್ಪಡಿಸಿದ್ದು, ಯಾವುದೇ ಉಡುಗೊರೆ, ಹಾರ ತರಬೇಡಿ ಪ್ರೀತಿಯಿಂದ ಬಂದು ಹಾರೈಸಿ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...