alex Certify
ಕನ್ನಡ ದುನಿಯಾ       Mobile App
       

Kannada Duniya

ಯಶ್, ರಾಧಿಕಾ ಪಂಡಿತ್ ಗೆ ಸಿಕ್ಕಿದೆ ಭರ್ಜರಿ ಗಿಫ್ಟ್

ಸ್ಯಾಂಡಲ್ ವುಡ್ ಯಶಸ್ವಿ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ನಿಜ ಜೀವನದಲ್ಲಿಯೂ ಜೊತೆಯಾಗಿದ್ದಾರೆ.

ಯಶ್ ಹೈ ಬಜೆಟ್ ಚಿತ್ರ ‘ಕೆ.ಜಿ.ಎಫ್.’ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಅವರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿದ್ದಾರೆ.

ಮದುವೆಯ ಬಳಿಕ ಬಿಡುವಿನಲ್ಲಿದ್ದ ರಾಧಿಕಾ ಪಂಡಿತ್ ಸೆಪ್ಟಂಬರ್ ನಿಂದ ಹೊಸ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ.

ಬಿಡುವಿನ ಅವಧಿಯಲ್ಲಿ ರಾಧಿಕಾ ಅಡುಗೆ ಮಾಡುವುದನ್ನು ಅದರಲ್ಲಿಯೂ ವಿಶೇಷವಾಗಿ ಮುದ್ದೆ ಮಾಡುವುದನ್ನು ಅತ್ತೆಯವರಿಂದ ಕಲಿತದ್ದಾಗಿ ಹೇಳಿಕೊಂಡಿದ್ದರು.

ಯಶ್ ದಂಪತಿ ಹೊಸ ಮನೆಯನ್ನು ಖರೀದಿಸಿದ್ದು, ಇಂಟೀರಿಯರ್ ಕೆಲಸ ಪೂರ್ಣಗೊಂಡ ಬಳಿಕ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿತ್ತು.

ಅಂದಹಾಗೇ, ಯಶ್ ಮತ್ತು ರಾಧಿಕಾ ದಂಪತಿಗಾಗಿ ಯಶ್ ಅವರ ತಾಯಿ ಈ ಹೊಸ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಶ್, ಅಮ್ಮನಿಗೆ ಹೊಸ ಮನೆ ಕಟ್ಟಿಸಬೇಕೆಂಬ ಕನಸಿತ್ತು. ಅವರು ಕೆಲ ತಿಂಗಳ ಹಿಂದೆಯೇ ಮನೆ ಖರೀದಿಸಲು ತೀರ್ಮಾನಿಸಿದ್ದು, ಅವರು ನಮಗಾಗಿ ಕೊಟ್ಟ ಉಡುಗೊರೆಯಾಗಿದೆ ಎಂದು ಹೇಳಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...