alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯದ ಬಗ್ಗೆ ಗುಟ್ಟು ಬಿಟ್ಟು ಕೊಟ್ಟ ಯಶ್

ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಬರ್ತಾರಾ? ಇಲ್ವಾ? ಎನ್ನುವ ಮಾತುಗಳಿಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ತಾವು ರಾಜಕಾರಣಕ್ಕೆ ಬರುವುದಿಲ್ಲ. ಆದರೆ, ಸಾಮಾಜಿಕ ಕಾರ್ಯಗಳನ್ನು ಮಾಡುವವರಿಗೆ ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಯಶ್, ಪ್ರತಿಯೊಂದು ಕ್ಷೇತ್ರಕ್ಕೆ ಅದರದ್ದೇ ಆದ ಸಮಸ್ಯೆಗಳಿರುತ್ತವೆ. ಕೆರೆಗಳನ್ನು ಸಂರಕ್ಷಿಸುವ, ಗಿಡಗಳನ್ನು ನೆಟ್ಟು ಪೋಷಿಸುವವರಿಗೆ ಬೆಂಬಲ ನೀಡುತ್ತೇನೆ. ಹಲವಾರು ಮಂದಿ ರಾಜಕಾರಣಿಗಳು ಪರಿಚಿತರಾಗಿದ್ದಾರೆ. ಕೆಲವರು ಪ್ರಚಾರಕ್ಕೆ ಕರೆದಿದ್ದಾರೆ. ನಾನು ಹೇಳಿದ ಕೂಡಲೇ ಜನ ವೋಟ್ ಹಾಕ್ತಾರಾ? ಈಗ ರಾಜಕಾರಣದ ವಿಷಯವೇ ಬೇರೆ ಎಂದು ತಿಳಿಸಿದ್ದಾರೆ.

ರಾಜಕಾರಣ ಸುಲಭವಾಗೇನೂ ಇಲ್ಲ, ನಾನು ರಾಜಕಾರಣಕ್ಕೆ ಬರುವುದು ಕಷ್ಟವೇನಲ್ಲ, ಮೂಲಸೌಕರ್ಯ, ಶಿಕ್ಷಣ, ರೈತರ ಸಮಸ್ಯೆಗೆ ಪರಿಹಾರ ಹೀಗೆ ಆದ್ಯತೆಯ ಕೆಲಸಗಳು ಮೊದಲು ಆಗಬೇಕಿದೆ. ಎಲ್ಲಾ ಕೆಲಸ ಮಾಡಲು ಜ್ಞಾನ, ಪವರ್ ಬೇಕು. ನಾನಂತೂ ರಾಜಕಾರಣಕ್ಕೆ ಬರಲ್ಲ. ಜನರಿಗೂ ಜವಾಬ್ದಾರಿ ಬೇಕು. ಅವರು ಎಚ್ಚೆತ್ತುಕೊಳ್ಳಬೇಕು. ಎಂದು ಹೇಳಿದ್ದಾರೆ.

ಸುಖಾಸುಮ್ಮನೆ ನನ್ನ ಕುರಿತಾಗಿ ಮಾತುಗಳು ಕೇಳಿ ಬಂದ ಕಾರಣ ಸ್ಪಷ್ಟನೆ ನೀಡುತ್ತಿದ್ದೇನೆ. ಮನೆ ಬಾಡಿಗೆ ವಿಚಾರಕ್ಕೆ ಮತ್ತೆ ಮತ್ತೆ ಏನೇನೋ ಮಾತುಗಳು ಕೇಳಿ ಬರುತ್ತವೆ. ನಾನು ಉತ್ತರ ಕೊಡಬೇಕಿರುವುದು ಜನರಿಗೆ. ನಾವು ಮನೆ ಮಾಲೀಕರಿಗೆ ತೊಂದರೆ ಕೊಟ್ಟಿಲ್ಲ. ಪ್ರತಿ ತಿಂಗಳು ಬಾಡಿಗೆ ಪಾವತಿಸಿದ್ದೇವೆ. ಆ ಮನೆ ಲಕ್ಕಿ ಎಂಬ ಕಾರಣಕ್ಕೆ ನಾನು ಬಿಟ್ಟಿಲ್ಲ ಎಂದೆಲ್ಲಾ ಕೆಲವರು ಆರೋಪಿಸಿದ್ದಾರೆ. ನನಗೆ ಲಕ್ಕಿ ಮನೆ ಎನ್ನುವುದರಲ್ಲಿ ನಂಬಿಕೆ ಇಲ್ಲ. ಅಂತಹುದನ್ನು ನಾನು ನಂಬುವುದಿಲ್ಲ. ಮನೆ ಕಾರಣಕ್ಕೆ ಸಿನಿಮಾ ಹಿಟ್ ಆಗಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...