alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಪ್ರವೇಶ ಕುರಿತು ಯಶ್ ಹೇಳಿದ್ದೀಗೆ….

ಕೊಪ್ಪಳ: ರಾಕಿಂಗ್ ಸ್ಟಾರ್ ಯಶ್ ದಂಪತಿ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ. ಯಶೋ ಮಾರ್ಗ ಸಂಸ್ಥೆ ಮೂಲಕ ಹೂಳು ತುಂಬಿಕೊಂಡಿದ್ದ ತಲ್ಲೂರು ಕೆರೆಯ ಜೀರ್ಣೋದ್ಧಾರ ಕಾರ್ಯಕ್ಕೆ ಕಳೆದ ಫೆಬ್ರವರಿಯಲ್ಲಿ ಚಾಲನೆ ನೀಡಲಾಗಿತ್ತು.

ಯಶ್ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಬತ್ತಿದ್ದ ಕೆರೆ ಭರ್ತಿಯಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಜನ, ಜಾನುವಾರುಗಳಿಗೆ ಅನುಕೂಲವಾಗಿದೆ.

ತುಂಬಿದ ಕೆರೆಯನ್ನು ವೀಕ್ಷಿಸಿದ ಯಶ್ ದಂಪತಿ ಬಾಗಿನ ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯ ಒಬ್ಬರಿಂದ ಆಗುವ ಕೆಲಸವಲ್ಲ, ಎಲ್ಲರ ಪ್ರಯತ್ನದಿಂದ ಆಗಿದೆ. ಕೆರೆ ತುಂಬಿರುವುದರಿಂದ ಸಂತಸವಾಗಿದೆ ಎಂದು ಹೇಳಿದ್ದಾರೆ.

ಕೆರೆ ತುಂಬಿದ್ದರಿಂದ ಕನಸು ನನಸಾದಂತಾಗಿದೆ. ಇದನ್ನು ಎಲ್ಲರೊಂದಿಗೆ ಸಂಭ್ರಮಿಸಬೇಕೆಂದು ಬಂದಿದ್ದೇನೆ. ನಾನು ರಾಜಕೀಯಕ್ಕೆ ಬರುವ ಉದ್ದೇಶ ಹೊಂದಿಲ್ಲ. ಬರುವುದಾಗಿದ್ದರೆ ಇಲ್ಲಿಗೆ ಬಂದು ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿರಲಿಲ್ಲ ಎಂದು ಯಶ್ ತಿಳಿಸಿದ್ದಾರೆ.

ರಾಧಿಕಾ ಪಂಡಿತ್ ಮಾತನಾಡಿ, ಮದುವೆಯಾದ ಬಳಿಕ ಕೈಗೊಂಡ ಮೊದಲ ಕೆಲಸ ಇದಾಗಿದ್ದು, ಕೆರೆ ತುಂಬಿರುವುದು ಖುಷಿ ತಂದಿದೆ. ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸ ಸ್ಪೂರ್ತಿಯಾಗಲಿ ಎಂದು ಹೇಳಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಆಗಮನದ ಹಿನ್ನಲೆಯಲ್ಲಿ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...