alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಭಾರೀ ಚರ್ಚೆಯಾಗ್ತಿದೆ ಯಶ್ ‘ಕೆ.ಜಿ.ಎಫ್.’

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಕುರಿತಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ, ಸಿನಿರಸಿಕರಲ್ಲಿ ಕುತೂಹಲ ಜಾಸ್ತಿಯಾಗಿದೆ.

‘ಕೆ.ಜಿ.ಎಫ್.’ ಒಂದೇ ಒಂದು ಪೋಸ್ಟರ್ ನಿಂದ ಚಿತ್ರ ಹಲ್ ಚಲ್ ಎಬ್ಬಿಸಿತ್ತು. ಪೋಸ್ಟರ್ ನಲ್ಲಿದ್ದ ಯಶ್ ಲುಕ್ ಅಭಿಮಾನಿಗಳನ್ನು ಮೋಡಿ ಮಾಡಿತ್ತು. ಇದಾದ ಬಳಿಕ ಬಂದ 2 ನೇ ಪೋಸ್ಟರ್, ಟೀಸರ್ ಕೂಡ ಅಭಿಮಾನಿಗಳನ್ನು ಸೆಳೆದಿತ್ತು. ಯಶ್ ಸಿನಿಮಾಕ್ಕಾಗಿ ವರ್ಷದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ‘ಕೆ.ಜಿ.ಎಫ್’. ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನ, ವಿಜಯ ಕಿರಂಗದೂರು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರದ ಚಿತ್ರೀಕರಣವನ್ನು ಕೆ.ಜಿ.ಎಫ್. ಬಳಿ ನಿರ್ಮಿಸಲಾದ ವಿಶೇಷ ಅದ್ಧೂರಿ ಸೆಟ್ ನಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ನಡೆಸಲಾಗಿದೆ.

ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಚಿತ್ರ ನಿರ್ಮಾಣವಾಗ್ತಿದ್ದು, ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ. ಏಪ್ರಿಲ್ ಇಲ್ಲವೇ ಮೇ ನಲ್ಲಿ ಚಿತ್ರ ತೆರೆಗೆ ಬರಲಿದೆ.

80 ರ ದಶಕದ ಕಥಾಹಂದರವಿರುವ ಚಿತ್ರದಲ್ಲಿ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೇಕಿಂಗ್ ವಿಡಿಯೋ ಕುತೂಹಲ ಹೆಚ್ಚಿಸಿದೆ. ‘ಕೆ.ಜಿ.ಎಫ್.’ 100 ಕೋಟಿ ರೂ. ಕ್ಲಬ್ ಸೇರುವ ನಿರೀಕ್ಷೆ ಇದ್ದು, ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಲೆಕ್ಕಾಚಾರ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...