alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡಿನಲ್ಲೂ ರಾಕಿಂಗ್ ಸ್ಟಾರ್ ಹವಾ….

ರಾಜ್ಯದಲ್ಲಿ ಪರಭಾಷ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾಗುವುದು ಸಾಮಾನ್ಯ. ಕನ್ನಡದ ಹಲವು ಚಿತ್ರಗಳು ಹೊರ ರಾಜ್ಯಗಳಲ್ಲಿಯೂ ಕಮಾಲ್ ಮಾಡಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಟೀಸರ್ ತಮಿಳುನಾಡಿನಲ್ಲಿಯೂ ಅಭಿಮಾನಿಗಳನ್ನು ಸೆಳೆದಿದೆ.

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ಕೆ.ಜಿ.ಎಫ್.’ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ನಿರ್ಮಾಣವಾಗ್ತಿದೆ. ಈಗಾಗಲೇ ಗಡಿಭಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳನ್ನು ಸೆಳೆದಿದ್ದು, ‘ಕೆ.ಜಿ.ಎಫ್.’ ಮೂಲಕ ಹಲ್ ಚಲ್ ಎಬ್ಬಿಸಿದ್ದಾರೆ.

ಬಿಡುಗಡೆಯಾಗಿರುವ ಟೀಸರ್ ತಮಿಳುನಾಡಿನಲ್ಲಿಯೂ ಯಶ್ ಅಭಿಮಾನಿಗಳನ್ನು ಸೆಳೆದಿದೆ. ಯಶ್ ಅವರ ‘ಕೆ.ಜಿ.ಎಫ್.’ ಟೀಸರ್ ಗೆ ಫಿದಾ ಆಗಿರುವ ಅಭಿಮಾನಿಗಳು ಚಿತ್ರ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಯಶ್ ಅವರ ಫೋಸ್ಟರ್ ಗಳನ್ನು ಹಾಕಿ ಸಂಭ್ರಮಿಸಿದ್ದಾರೆ.

‘ಕೆ.ಜಿ.ಎಫ್.’ ಮೂಲಕ ಯಶ್ ಸ್ಯಾಂಡಲ್ ವುಡ್ ಮಾತ್ರವಲ್ಲದೇ, ಸೌತ್ ಸಿನಿ ದುನಿಯಾದಲ್ಲಿಯೂ ಸದ್ದು ಮಾಡಲು ಸಜ್ಜಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...