alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಯಶ್ ‘KGF’ ಕುರಿತ ಇಂಟ್ರೆಸ್ಟಿಂಗ್ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. 5 ಭಾಷೆಗಳಲ್ಲಿ ಅದ್ಧೂರಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗ್ತಿದೆ.

80 ರ ದಶಕದ ಕಥಾ ಹಂದರವಿರುವ ಈ ಚಿತ್ರದ ಒಂದೇ ಒಂದು ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ‘KGF’ ಕುತೂಹಲ ಮೂಡಿಸಿದೆ. ಈ ಚಿತ್ರದ ಮೂಲಕ ಯಶ್ 4 ಭಾಷೆಗಳಿಗೆ ಎಂಟ್ರಿ ಕೊಡಲಿದ್ದಾರೆ. ಯಶ್ ಸ್ವಾಗತಕ್ಕೆ ಬೇರೆ ಭಾಷೆಗಳ ಅಭಿಮಾನಿಗಳು ಸಜ್ಜಾಗಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ 5 ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿದ್ದಾರೆ. ಮುಂದಿನ ಯಶ್ ಅಭಿನಯದ ಚಿತ್ರಗಳು ಕೂಡ 5 ಭಾಷೆಯಲ್ಲಿ ರಿಲೀಸ್ ಆಗಲಿವೆ ಎನ್ನಲಾಗಿದೆ.

5 ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿರುವುದರ ಹಿಂದೆ ರಾಕಿಂಗ್ ರಣತಂತ್ರವಿದೆ. ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ತೆರೆ ಕಂಡಾಗ ಹೊಸ ಟ್ರೆಂಡ್ ಸೃಷ್ಠಿಸಲಾಗಿತ್ತು. ಗಡಿನಾಡಿನಲ್ಲಿ ಹೆಚ್ಚು ಸೆಂಟರ್ ಗಳಲ್ಲಿ ಚಿತ್ರ ಬಿಡುಗಡೆಯಾಗಿ ಗಳಿಕೆಯಲ್ಲಿಯೂ ಕಮಾಲ್ ಮಾಡಿತ್ತು. ಈಗ ಪರಭಾಷೆಗಳಿಗೂ ಚಿತ್ರ ತೆಗೆದುಕೊಂಡು ಹೋಗಲು ನಿರ್ಮಾಪಕ ವಿಜಯ್ ಕಿರಂಗದೂರು, ಯಶ್ ಪ್ಲಾನ್ ಮಾಡಿದ್ದಾರೆ.

ಕೆ.ಜಿ.ಎಫ್. ಬಳಿ ನಿರ್ಮಿಸಲಾದ ವಿಶೇಷ ಸೆಟ್ ನಲ್ಲಿ ಮತ್ತು ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದುವರೆಗೂ ಒಂದೆರಡು ಫೋಟೋಗಳ ಹೊರತಾಗಿ ಚಿತ್ರದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಚಿತ್ರ ತಂಡ ನೀಡಿಲ್ಲ. ಪೋಸ್ಟರ್ ಗಳಲ್ಲಿ ಯಶ್ ಕಾಣಿಸಿಕೊಂಡಿರುವ ಸ್ಟೈಲ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...