alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮನೆಗೂ ಬರಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಸಾಕು, ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟುತ್ತದೆ. ಯಶ್ ಅವರಿಗೂ ಅಭಿಮಾನಿಗಳೆಂದ್ರೆ ಅಚ್ಚು ಮೆಚ್ಚು. ಬಿಡುವಿನ ವೇಳೆಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡ್ತಾರೆ.

ಯಶ್ ಸಿನಿಮಾ ಮಾತ್ರವಲ್ಲದೇ, ಸಾಮಾಜಿಕ ಸೇವೆ ಮೂಲಕ ಮಾದರಿ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಕಾರ್ಯಗಳ ಮೂಲಕ ಯುವಕರಿಗೂ ಸ್ಪೂರ್ತಿ ನೀಡುತ್ತಾರೆ. ಸದ್ಯ ಯಶ್ ‘ಕೆ.ಜಿ.ಎಫ್.’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಬಹುಭಾಷೆಗಳಲ್ಲಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗ್ತಿರುವ ‘ಕೆ.ಜಿ.ಎಫ್.’ ಭಾರೀ ನಿರೀಕ್ಷೆ ಮೂಡಿಸಿದೆ. ವಿಷಯ ಸಿನಿಮಾದ್ದಲ್ಲ, ಬದಲಾಗಿ ಕಿರುತೆರೆ ಕುರಿತಾಗಿದ್ದು. ಹೌದು, ರಾಕಿಂಗ್ ಸ್ಟಾರ್ ಯಶ್ ಕಿರುತೆರೆಯಲ್ಲಿ ಮತ್ತೆ ಮಿಂಚಲಿದ್ದಾರೆ.

‘ಕನ್ನಡದ ಕೋಟ್ಯಧಿಪತಿ’ ಶೋ ಮತ್ತೆ ಆರಂಭವಾಗಲಿದ್ದು, ಯಶ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೋಸ್ಟ್ ಮಾಡಿದ್ದ ‘ಕನ್ನಡದ ಕೋಟ್ಯಧಿಪತಿ’ ಭರ್ಜರಿ ಯಶಸ್ಸು ಕಂಡಿತ್ತು. ಈಗ ‘ಕನ್ನಡದ ಕೋಟ್ಯಧಿಪತಿ’ ಮತ್ತೆ ಶುರುವಾಗಲಿದ್ದು, ಯಶ್ ಹೋಸ್ಟ್ ಮಾಡಲಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್ ನಿಂದ ಶೋ ಆರಂಭವಾಗಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆದಿವೆ. ಶೀಘ್ರವೇ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ. ನೀವು ಮನೆಯಲ್ಲೇ ಕುಳಿತು ಯಶ್ ಅವರ ಕಾರ್ಯಕ್ರಮ ನೋಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...