alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ! ಯಶ್ ಖರೀದಿಸಿದ ಅಪಾರ್ಟ್ ಮೆಂಟ್ ಬೆಲೆ ಎಷ್ಟು ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಲ್ಲಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕವೂ ತಮ್ಮನ್ನು ತೊಡಗಿಸಿಕೊಂಡಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿ ಮನೆ ಮಾತಾಗಿದ್ದಾರೆ.

ಇತ್ತೀಚೆಗಷ್ಟೇ ದುಬಾರಿ ಬೆಲೆಯ 3 ಕಾರುಗಳನ್ನು ಯಶ್ ಖರೀದಿಸಿದ್ದರು. ತಂದೆ –ತಾಯಿ, ಪತ್ನಿ ರಾಧಿಕಾ ಪಂಡಿತ್ ಹಾಗೂ ತಮಗಾಗಿ ಅವರು ಕಾರುಗಳನ್ನು ಖರೀದಿಸಿದ್ದರು.

ಈಗ ಅವರು ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಪ್ರೆಸ್ಟಿಜ್ ಆಬ್ಸಹಾಟ್ ಅಪಾರ್ಟ್ ಮೆಂಟ್ ನ 2 ಪೆಂಟ್ ಹೌಸ್ ಗಳನ್ನು ಅವರು ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 25 -30 ಕೋಟಿ ರೂ. ಎನ್ನಲಾಗಿದೆ.

ಇದೇ ಅಪಾರ್ಟ್ ಮೆಂಟ್ ನಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಶಾಸಕ ಅನಿಲ್ ಲಾಡ್, ಶ್ರೀಮಂತ ನಾಯಕರು, ಉದ್ಯಮಿಗಳು ವಾಸವಾಗಿದ್ದಾರೆ. ಅಪಾರ್ಟ್ ಮೆಂಟ್ ನ ತುದಿಯಲ್ಲಿ ಯಶ್ ಪೆಂಟ್ ಹೌಸ್ ಖರೀದಿಸಿದ್ದು, ಅಲ್ಲಿಂದ ವಿಧಾನಸೌಧ, ಸಿ.ಎಂ. ನಿವಾಸ, ಗಾಲ್ಫ್ ಹೌಸ್ ಕಾಣಿಸುತ್ತವೆ.

ಯಶ್ ಅಭಿನಯದ ‘ಕೆ.ಜಿ.ಎಫ್’ ಚಿತ್ರೀಕರಣ ಭರದಿಂದ ಸಾಗಿದ್ದು, ಅಭಿಮಾನಿಗಳು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...