alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಯಶ್ ಗಡ್ಡಕ್ಕೆ ಸಿಕ್ತು ಮುಕ್ತಿ…!

ಯಶ್ ಗಡ್ಡ ಯಾವಾಗ ತೆಗೀತೀರಾ…? ಬಹುಶಃ ಎರಡು ವರ್ಷದಿಂದ ಯಶ್ ಹೋದಲ್ಲಿ ಬಂದಲ್ಲಿ ಈ ಪ್ರಶ್ನೆಯನ್ನ ಕೇಳೋರ ಸಂಖ್ಯೆ ಜಾಸ್ತಿ ಇತ್ತು. ಅಭಿಮಾನಿಗಳಿಗೆ ಆರಂಭದಲ್ಲಿ ರಾಕಿಂಗ್ ಸ್ಟಾರ್ ಹೊಸ ಗೆಟಪ್ ನೋಡಿ ಖುಷಿಯಾಗಿತ್ತು. ಆದ್ರೆ ಒಂದಷ್ಟು ಕಾಲ ಕಾದ ನಂತರ ಅವರಿಗೂ ಕೂಡ ಯಶ್ ಯಾವಾಗ ಗಡ್ಡ ಬೋಳಿಸ್ತಾರೆ ಅನ್ನೋ ಪ್ರಶ್ನೆ ಕಾಡೋದಕ್ಕೆ ಶುರುವಾಗಿತ್ತು.

ಅಭಿಮಾನಿಗಳಿಗೆ ಅಷ್ಟೇ ಅಲ್ಲ ಸ್ಯಾಂಡಲ್ವುಡ್ ಸಿಂಡ್ರೆಲಾ ಯಶ್ ಧರ್ಮಪತ್ನಿ ರಾಧಿಕಾ ಪಂಡಿತ್ ಕೂಡ ಯಶ್ ಗಡ್ಡಕ್ಕೆ ಕತ್ತರಿ ಯಾವಾಗ ಬೀಳುತ್ತೆ ಅನ್ನೋದನ್ನೇ ಎದುರು ನೋಡುತ್ತಿದ್ದರು. ತಮ್ಮ ಪತಿದೇವರನ್ನ ಗಡ್ಡದಾರಿಯಾಗಿ ನೋಡಿ ನೋಡಿ ಅವರಿಗೂ ಸದ್ಯ ಇವರು ಗಡ್ಡ ತೆಗೆದ್ರೆ ಸಾಕು ಅನ್ನಿಸಿಬಿಟ್ಟಿತ್ತು.

ಕೊನೆಗೂ ಎಲ್ಲರ ಅಪೇಕ್ಷೆಯಂತೆ ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಸಿದ್ದಾರೆ. ಕೆಜಿಎಫ್ ಚಿತ್ರೀಕರಣಕ್ಕಾಗಿ ಉದ್ದ ಕೂದಲು ಮತ್ತು ಪೊದೆಯಂತಹ ಗಡ್ಡ ಬೆಳೆಸಿದ್ದ ಯಶ್ ಈಗ ಅದನ್ನ ಟ್ರಿಮ್ ಮಾಡಿಸಿಕೊಂಡಿದ್ದಾರೆ.

ತಮ್ಮ ಮುಂದಿನ ಚಿತ್ರ ಕಿರಾತನ ಸೀಕ್ವೆಲ್ ಗಾಗಿ ಯಶ್ ಹಿಂದಿನ ಲುಕ್ ಗೆ ಮರಳಿದ್ದಾರೆ. ಯಶ್ ಗಡ್ಡಕ್ಕೆ ಕತ್ತರಿ ಬೀಳುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸುದ್ದಿ ಮಾಡ್ತಿದೆ. ಯಶ್ ಮುಂದಿನ ಸಿನಿಮಾ ಮೈ ನೇಮ್ ಈಸ್ ಕಿರಾತಕ ಚಿತ್ರದ ಪೂಜೆಯೂ ನೆರವೇರಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಅತ್ತ ಪರ್ಸನಲ್ ಲೈಫ್ ನಲ್ಲಿ ಕೂಡ ಯಶ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದ್ರಿಂದ ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಭ್ರಮ ಜೋರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...