alex Certify
ಕನ್ನಡ ದುನಿಯಾ       Mobile App
       

Kannada Duniya

‘ಕುರುಕ್ಷೇತ್ರ’ದ ಕುರಿತು ಯಶ್ ಹೇಳಿದ್ದೇನು…?

yash-fans

ಸ್ಯಾಂಡಲ್ ವುಡ್ ಹೈ ಬಜೆಟ್ ಸಿನಿಮಾ ‘ಕುರುಕ್ಷೇತ್ರ’ಕ್ಕಾಗಿ ಪೂರ್ವಭಾವಿ ಕೆಲಸಗಳು ನಡೆದಿವೆ. ಮುನಿರತ್ನ ನಿರ್ಮಾಣದಲ್ಲಿ, ನಾಗಣ್ಣ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರ್ಣನ ಪಾತ್ರದಲ್ಲಿ ಸುದೀಪ್ ನಟಿಸಬೇಕೆಂದು ಚಿತ್ರತಂಡದ ಆಸೆಯಾಗಿತ್ತಾದರೂ, ಅವರು ಒಪ್ಪದ ಕಾರಣ, ದರ್ಶನ್ ಅವರೇ ಕರ್ಣನ ಪಾತ್ರಕ್ಕೂ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

ಇನ್ನು ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರನ್ನೆಲ್ಲಾ ಸೇರಿಸಬೇಕೆಂದು ಮುನಿರತ್ನ ಬಯಸಿದ್ದರಾದರೂ, ಕಾರಣಾಂತರದಿಂದ ಅದು ಕೈಗೂಡಿಲ್ಲ.

ಕ್ರೇಜಿಸ್ಟಾರ್ ರವಿಚಂದ್ರನ್, ರೆಬಲ್ ಸ್ಟಾರ್ ಅಂಬರೀಶ್ ‘ಕುರುಕ್ಷೇತ್ರ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ರಾಕಿಂಗ್ ಸ್ಟಾರ್ ಕೂಡ ಅಭಿನಯಿಸಲಿದ್ದಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

ಆದರೆ, ಯಶ್ ಅವರೇ ನಟಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ‘ಕುರುಕ್ಷೇತ್ರ’ದಲ್ಲಿ ನಟಿಸುವಿರಾ ಎಂದು ಕೇಳಿದ್ದಕ್ಕೆ ಯಶ್ ಇಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...