alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿತ್ತು ಗೊತ್ತಾ ಯಶ್ ಬರ್ತಡೇ ಸಂಭ್ರಮ..?

yash

ಬೆಂಗಳೂರು: ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ, ರಾಕಿಂಗ್ ಸ್ಟಾರ್ ಯಶ್ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಹೊಸಕೆರೆ ಹಳ್ಳಿಯಲ್ಲಿರುವ ಯಶ್ ನಿವಾಸಕ್ಕೆ ರಾತ್ರಿಯಿಂದಲೇ, ಅಭಿಮಾನಿಗಳು ಆಗಮಿಸಿದ್ದು, ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ.

ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿದ ಯಶ್ ಧನ್ಯವಾದ ಹೇಳಿದ್ದಾರೆ. ಯಶ್ ಗೆ ಹಾರ ಹಾಕಿದ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇದೇ ಸಂದರ್ಭದಲ್ಲಿ ಯಶ್ ಸಾಮಾಜಿಕ ಸೇವಾ ಸಂಸ್ಥೆ ‘ಯಶೋಮಾರ್ಗ’ದ ವೆಬ್ ಸೈಟ್ ಲಾಂಚ್ ಮಾಡಲಾಗಿದೆ. ಮದುವೆಯಾದ ಬಳಿಕ ಯಶ್ ಅವರ ಮೊದಲ ಹುಟ್ಟುಹಬ್ಬ ಇದಾಗಿದೆ. ಅಲ್ಲದೇ, ಭಾರೀ ಬಜೆಟ್ ನ ‘ಕೆ.ಜಿ.ಎಫ್’ ಚಿತ್ರ ಕೂಡ ಆರಂಭವಾಗಲಿದ್ದು, ಇಂದಿನ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.

ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಯಶ್ ಅವರ 31 ನೇ ಹುಟ್ಟುಹಬ್ಬದ ಪ್ರಯುಕ್ತ ಶುಭ ಕೋರಲು ದೂರದ ಊರುಗಳಿಂದಲೂ ಅಭಿಮಾನಿಗಳು ಆಗಮಿಸಿದ್ದರು. ಅವರ ನಿವಾಸದ ಬಳಿ ಶುಭ ಕೋರುವ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...