alex Certify
ಕನ್ನಡ ದುನಿಯಾ       Mobile App
       

Kannada Duniya

ಬಚ್ಚಾ ಎಂದಿದ್ದ ಶಾಸಕರಿಗೆ ತಿರುಗೇಟು ಕೊಟ್ಟ ಯಶ್

ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಬಿ. ಶ್ರೀರಾಮುಲು ಪರವಾಗಿ ಸ್ಟಾರ್ ನಟರಾದ ಸುದೀಪ್ ಮತ್ತು ಯಶ್ ಅವರು ಪ್ರಚಾರ ನಡೆಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಹಾಗೂ ಪಕ್ಷೇತರ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಅವರು, ನಾನು ಚಿಕ್ಕವನಿದ್ದಾಗಲೇ ಬಣ್ಣ ಹಚ್ಚಿದ್ದೆ. ನನ್ನ ಮುಂದೆ ಸುದೀಪ್, ಯಶ್ ಬಚ್ಚಾಗಳು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಯಶ್ ತಿರುಗೇಟು ನೀಡಿದ್ದಾರೆ.

ನೆಲಮಂಗಲದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಎಂ.ವಿ. ನಾಗರಾಜು ಪರವಾಗಿ ಪ್ರಚಾರ ನಡೆಸಿದ ಯಶ್ ಸುದ್ದಿಗಾರರೊಂದಿಗೆ ಮಾತನಾಡಿ. ರಾಜಕೀಯ ಗೇಮ್ ಇದ್ದಂತೆ. ಒಬ್ಬರು ಗೆಲ್ಲಬೇಕಾದರೆ, ಉಳಿದವರು ಸೋಲಲೇಬೇಕು. ಶ್ರೀರಾಮುಲು ಅವರು ಪರಿಚಿತರಾಗಿದ್ದು, ಅವರಿಗಾಗಿ ಮತ್ತು ಅಭಿಮಾನಿಗಳಿಗಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.

ಶಾಸಕರು ಹೇಳಿದ್ದು ನಿಜ. ಅವರು ಹಿರಿಯರಾಗಿದ್ದಾರೆ. ಅವರ ಮುಂದೆ ನಾನು ಬಚ್ಚಾ. ಜನ ಎಲ್ಲವನ್ನು ತೀರ್ಮಾನಿಸುತ್ತಾರೆ. ಜನಕ್ಕೆ ಎಲ್ಲವೂ ಗೊತ್ತಿದೆ. ಜನರ ಪ್ರೀತಿ ಗಳಿಸುವವರಿಗೆ ನಾನು ಸಹಕಾರಿಯಾಗಿದ್ದೇನೆ. ನಾನು ಪ್ರಚಾರ ಮಾಡಿರುವ ಅಭ್ಯರ್ಥಿಗಳು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯ ಎಂದು ಹೇಳಿದ್ದಾರೆ.

ಸೋಲು, ಗೆಲುವು ಸಹಜ. ನನ್ನನ್ನು ಕೆಟ್ಟವ ಎಂದು ಹೇಳಿದವರೇ ಒಳ್ಳೆಯವನೆಂದು ಮೆಚ್ಚಿದ್ದಾರೆ. ನಾನು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಕೆಲವರಿಗೆ ಭಯವಾಗಿರಬಹುದು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...