alex Certify
ಕನ್ನಡ ದುನಿಯಾ       Mobile App
       

Kannada Duniya

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಸುದ್ದಿ

yash radhika

ಕನ್ನಡ ಚಿತ್ರರಂಗದ ಬಹು ಬೇಡಿಕೆ ನಟ, ರಾಕಿಂಗ್ ಸ್ಟಾರ್ ಯಶ್ ಅವರ ‘ಮಾಸ್ಟರ್ ಪೀಸ್’ ಭರ್ಜರಿ ಯಶಸ್ಸಿನ ನಂತರ ಕೆ. ಮಂಜು ನಿರ್ಮಾಣದ, ಮಹೇಶ್ ರಾವ್ ನಿರ್ದೇಶನದ ಸಿನೆಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಯಶ್ ಗೆ ನಾಯಕಿಯಾಗಿ ರಾಧಿಕಾ ಪಂಡಿತ್ ಕಾಣಿಸಿಕೊಳ್ಳುತ್ತಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗಿ ನಟಿಸಿದ್ದ ‘ಮೊಗ್ಗಿನ ಮನಸ್ಸು’, ‘ಡ್ರಾಮಾ’, ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಭರ್ಜರಿ ಯಶಸ್ಸು ಕಂಡಿದ್ದು, ಈಗ ಹೊಸ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರಕ್ಕೆ ಮೊದಲಿಗೆ ‘ಗಾಂಧಿಕ್ಲಾಸ್’ ಎಂದು ಹೆಸರಿಡಲಾಗಿತ್ತಾದರೂ, ನಂತರ ‘ಮಾಂಜಾ’ ಎಂದು ಹೇಳಲಾಗಿತ್ತು. ಆದರೆ, ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಇದಾದ ನಂತರ ಯಶ್ ಕನ್ನಡದ ಬಹುಕೋಟಿ ವೆಚ್ಛದ ಸಿನೆಮಾ ‘ಕೆಜಿಎಫ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ನಡುವೆ ಯಶ್ ‘ರಥಾವರ’ ನಿರ್ದೇಶಕ ಚಂದ್ರಶೇಖರ್ ನಿರ್ದೇಶನದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ‘ಕೆಜಿಎಫ್’ ಆರಂಭಿಕ ಹಂತದ ತಯಾರಿಯಲ್ಲಿದ್ದು, ಅದಾದ ಬಳಿಕ ಈ ಚಿತ್ರವನ್ನು ಒಪ್ಪಿಕೊಳ್ಳುವರೇ ಅಥವಾ ಅದಕ್ಕಿಂತ ಮೊದಲೇ ರಥಾವರ ನಿರ್ದೇಶಕರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...