alex Certify
ಕನ್ನಡ ದುನಿಯಾ       Mobile App
       

Kannada Duniya

‘KGF’ ನಲ್ಲಿ ಯಶ್ ಸ್ಟೈಲಿಶ್ ಲುಕ್, ರಾಯಲ್ ಬೈಕ್ ಕಿಕ್

ಸ್ಯಾಂಡಲ್ ವುಡ್ ನಲ್ಲಿ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ಕೆ.ಜಿ.ಎಫ್.’ ನಲ್ಲಿ ರಾಕಿಂಗ್ ಸ್ಟಾರ್ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ಯಶ್ ಗಾಗಿ ವಿಶೇಷ ಬೈಕ್ ಒಂದನ್ನು ಸಿದ್ಧಪಡಿಸಲಾಗಿದೆ. ನಾಯಕನ ಪಾತ್ರಕ್ಕೆ ಸೂಟ್ ಆಗುವಂತಹ ಬೈಕ್ ಅನ್ನು ಛಾಯಾಗ್ರಾಹಕ ಭುವನ್ ಗೌಡ ಸಿದ್ಧಪಡಿಸಿದ್ದಾರೆ. ರಾಯಲ್ ಕಾಂಟಿನೆಂಟಲ್ ಬೈಕ್ ಗೆ ರಾಯಲ್ ಟಚ್ ನೀಡಲಾಗಿದೆ.

ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಯಶ್ ಬೈಕ್ ನೊಂದಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಮಾತ್ರವಲ್ಲ, ಸಿನಿರಸಿಕರಲ್ಲಿಯೂ ಕುತೂಹಲ ಮೂಡಿಸಿದೆ. ಕೆ.ಜಿ.ಎಫ್. ಬಳಿ ನಿರ್ಮಿಸಲಾಗಿರುವ ವಿಶೇಷ ಸೆಟ್ ನಲ್ಲಿ ಮಾತ್ರವಲ್ಲದೇ ವಿವಿಧೆಡೆ ‘ಕೆ.ಜಿ.ಎಫ್.’ ಚಿತ್ರೀಕರಣ ನಡೆಸಲಾಗಿದೆ.

80 ರ ದಶಕದ ಕಥಾಹಂದರವಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ ನಿರ್ಮಾಣವಾಗ್ತಿದೆ. ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...