alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾದಲ್ಲಿ ಪ್ರೇಮಿಗಳ ದಿನ ಆಚರಿಸಿದ ಕ್ಯೂಟ್ ಜೋಡಿ

yash-1

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ರಾಧಿಕಾ ಹಾಗೂ ಯಶ್ ಪಾಲಿಗೆ ಈ ಬಾರಿಯ ವಾಲಂಟೈನ್ಸ್ ಡೇ ಸಖತ್ ಸ್ಪೆಷಲ್ ಆಗಿತ್ತು. ಮದುವೆ ನಂತರ ಜೊತೆಯಾಗಿ ಆಚರಿಸಿಕೊಳ್ತಿರೋ ಮೊದಲ ಪ್ರೇಮಿಗಳ ದಿನವಾಗಿದ್ದರಿಂದ ಸೆಲೆಬ್ರೇಶನ್ ಜೋರಾಗಿತ್ತು. ರಾಧಿಕಾರ ಫೇವರಿಟ್ ತಾಣ ಗೋವಾದಲ್ಲಿ ವಾಲಂಟೈನ್ ಡೇಯನ್ನು ಆಚರಿಸಿಕೊಂಡಿದ್ದಾರೆ.

ಗೋವಾದ ಕಡಲ ಕಿನಾರೆಯಲ್ಲಿ ಸ್ವಚ್ಛಂದವಾಗಿ ಯಶ್-ರಾಧಿಕಾ ವಿಹರಿಸಿದ್ದಾರೆ. ಹನಿಮೂನ್ ಮುಗಿಸಿಕೊಂಡು ಅಮೆರಿಕದಿಂದ ಬಂದ್ಮೇಲೆ ಸಂಬಂಧಿಕರ ಮನೆಗೆ ವಿಸಿಟ್ ಕೊಡೋದ್ರಲ್ಲಿ ನವದಂಪತಿ ಬ್ಯುಸಿಯಾಗಿದ್ರಂತೆ. ಈಗ ವಾಲಂಟೈನ್ ಡೇ ನೆಪದಲ್ಲಿ ಇಬ್ಬರೂ 4 ದಿನ ಗೋವಾದಲ್ಲಿ ಹಾಯಾಗಿ ಕಾಲ ಕಳೆದಿದ್ದಾರೆ.

ಯಶ್ – ರಾಧಿಕಾ 6 ವರ್ಷಗಳಿಂದ ಪರಸ್ಪರ ಪ್ರೀತಿಸ್ತಾ ಇದ್ರು. ಆದ್ರೆ ಮದುವೆ ನಂತರ ವಾಲಂಟೈನ್ ಡೇ ಆಚರಿಸಿರೋದು ಇದೇ ಮೊದಲ ಬಾರಿ. ಕೆಂಪು ಗುಲಾಬಿಗಳಿಂದ್ಲೇ ತುಂಬಿದ್ದ ಹೂವಿನ ಬೊಕೆ ಕೊಟ್ಟು ಯಶ್, ರಾಧಿಕಾಗೆ ಪ್ರೇಮ ನಿವೇದನೆ ಮಾಡ್ಕೊಂಡಿದ್ದಾರೆ. ಗೋವಾ ಬೀಚ್ ನಲ್ಲಿ ಇಬ್ರೂ ರೊಮ್ಯಾಂಟಿಕ್ ಡಿನ್ನರ್ ಕೂಡ ಮಾಡಿದ್ದಾರಂತೆ. ಗೋವಾದಲ್ಲಿ ಹಾಲಿಡೇ ಮುಗಿಸ್ಕೊಂಡು ಇಬ್ಬರೂ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...