alex Certify
ಕನ್ನಡ ದುನಿಯಾ       Mobile App
       

Kannada Duniya

ರಾಕಿಂಗ್ ಸ್ಟಾರ್ ಯಶ್ ಕಾರಿಗೆ ಹಾನಿ

car-ysa

ಯಾದಗಿರಿ: ರಾಕಿಂಗ್ ಸ್ಟಾರ್ ಯಶ್ ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದು, ಹಲವಾರು ಊರುಗಳಿಗೆ ಭೇಟಿ ನೀಡಿ, ರೈತರು, ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ.

ಕೆಲವೆಡೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಶಹಾಪುರದಲ್ಲಿ ರೈತರೊಂದಿಗೆ ಯಶ್ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸುಮಾರು 4 ಗಂಟೆ ತಡವಾಗಿ ಯಶ್ ಆಗಮಿಸಿದ್ದಾರೆ.

ತಾಳ್ಮೆ ಕಳೆದುಕೊಂಡ ಅಭಿಮಾನಿಗಳು ವೇದಿಕೆಯ ಮುಂಭಾಗದಲ್ಲಿ ಹಾಕಿದ್ದ ಕುರ್ಚಿಗಳನ್ನು ಹಾಳು ಮಾಡಿದ್ದಾರೆ. ಭಾರೀ ಸಂಖ್ಯೆಯಲ್ಲಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ನಡೆಸಿದ್ದಾರೆ. ತಡವಾಗಿ ಆಗಮಿಸಿದ ಯಶ್ 5 ನಿಮಿಷಗಳ ಕಾಲ ಮಾತಾಡಿ ಅಲ್ಲಿಂದ ಹೊರಟಿದ್ದಾರೆ.

ಈ ಸಂದರ್ಭದಲ್ಲಿ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಯಶ್ ಕಾರಿನ ಗಾಜುಗಳು ಪುಡಿಯಾಗಿವೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಯಶ್ ಪ್ರಯಾಣ ಮುಂದುವರೆಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯಶ್, ಮಾರ್ಗಮಧ್ಯೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ವಿಳಂಬವಾಗಿದೆ. ತಮ್ಮ ಕಾರಿನ ಮೇಲೆ ಯಾರೂ ಕಲ್ಲು ತೂರಾಟ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ಅಭಿಮಾನಿಗಳ ಪ್ರೀತಿ ದೊಡ್ಡದು. ಹೋದ ಕಡೆಯಲ್ಲೆಲ್ಲಾ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಲು ಮುಂದಾದರು. ನಾನೇ ಲಾಠಿ ಬೀಸಬೇಡಿ ಎಂದು ಹೇಳಿದ್ದೇನೆ. ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದರಿಂದ 20 ಕಿಲೋ ಮೀಟರ್ ಪ್ರಯಾಣಕ್ಕೆ 2-3 ಗಂಟೆ ತಡವಾಯಿತೆಂದು ಹೇಳಿದ್ದಾರೆ.

ಪ್ರೀತಿಯಿಂದ ಅಭಿಮಾನಿಗಳು ಆಗಮಿಸಿದ್ದರು. ಅವರಿಗೆ ನಿರಾಸೆಯಾಗದಂತೆ ಎಲ್ಲಾ ಕಡೆಗೂ ಭೇಟಿ ನೀಡಿದ್ದೇನೆ. ಕಾರಿಗೆ ಅಭಿಮಾನಿಗಳು ಕಲ್ಲು ತೂರಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕಾರಿನ ಬಳಿ ಆಗಮಿಸಿದ್ದರು ಎಂದು ತಿಳಿಸಿದ್ದಾರೆ.

ಅದೇನೆ ಇರಲಿ, ಅಭಿಮಾನಿಗಳ ಅಭಿಮಾನ ಉಕ್ಕಿ ಹರಿದು ಕಾರಿಗೆ ಹಾನಿಯಾಗಿದೆ. ಯಶ್ ಇಂದು ಬಳ್ಳಾರಿ ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...