alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ನಿರ್ಮಾಪಕಿ ಮೇಲೆ ಅತ್ಯಾಚಾರವೆಸಗಿದ್ದಾನಂತೆ ಈ ನಟ

ಬಾಲಿವುಡ್ ನಲ್ಲಿ ಮೀಟೂ ಅಭಿಯಾನ ಚುರುಕು ಪಡೆಯುತ್ತಿದೆ. ತನುಶ್ರೀ ದತ್ತಾ ನಂತ್ರ ಒಬ್ಬೊಬ್ಬರಾಗಿ ತಮ್ಮ ಮೇಲಾದ ಶೋಷಣೆಯನ್ನು ಹೊರ ಹಾಕ್ತಿದ್ದಾರೆ. ನಾನಾ ಪಾಟೇಕರ್, ಕೈಲಾಶ್ ಖೇರ್, ವಿಕಾಸ್ ಬಹಲ್ ನಂತ್ರ ಈಗ ಅಲೋಕ್ ನಾಥ್ ಸರದಿ.

ನಟ ಅಲೋಕ್ ನಾಥ್ ವಿರುದ್ಧ ಲೇಖಕಿ ಹಾಗೂ ನಿರ್ಮಾಪಕಿ ವಿಂಟಾ ನಂದಾ ಲೈಂಗಿಕ ಶೋಷಣೆ ಆರೋಪ ಮಾಡಿದ್ದಾರೆ. ವಿಂಟಾ ನಂದಾ, ಫೇಸ್ಬುಕ್ ನಲ್ಲಿ ತಮ್ಮ ಮೇಲಾದ ಶೋಷಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಂಟಾ, ಅಲೋಕ್ ಹೆಸರು ಹೇಳದೆ ಫೇಸ್ಬುಕ್ ನಲ್ಲಿ ತಮ್ಮ ಮೇಲಾದ ಶೋಷಣೆಯನ್ನು ಬರೆದಿದ್ದಾರೆ. 1994ರಲ್ಲಿ `ತಾರಾ’ ಶೂಟಿಂಗ್ ವೇಳೆ ನನ್ನ ಮೇಲೆ ಲೈಂಗಿಕ ಶೋಷಣೆ ನಡೆದಿದೆ ಎಂದು ವಿಂಟಾ ಹೇಳಿದ್ದಾರೆ.

ಇಷ್ಟೇ ಅಲ್ಲ ತಾರಾ ಶೂಟಿಂಗ್ ವೇಳೆ ಅಲೋಕ್ ಕುಡಿದು ಬರ್ತಿದ್ದರು. ಒಮ್ಮೆ ನಟಿ ನವನೀತ್ ಮೇಲೆ ಬಿದ್ದಿದ್ದಾರೆ. ನವನೀತ್ ಕಪಾಳ ಮೋಕ್ಷ ಮಾಡಿದ್ದರು ಎಂದು ವಿಂಟಾ ಬರೆದಿದ್ದಾರೆ. ವಿಂಟಾ ಎಲ್ಲಿಯೂ ಅಲೋಕ್ ಹೆಸರು ಹೇಳಿಲ್ಲ. ಸಂಸ್ಕಾರಿ ಎಂದು ಬಳಸಿದ್ದಾರೆ. ಅಲೋಕ್ ಸಂಸ್ಕಾರಿ ಬಾಬು ಎಂದೇ ಪ್ರಸಿದ್ಧವಾದ ಕಾರಣ ಇದು ಅವ್ರ ಮೇಲಿನ ಆರೋಪ ಎಂಬುದು ಸ್ಪಷ್ಟವಾಗುತ್ತದೆ. ಅಲೋಕ್ ಪತ್ನಿ ಹಾಗೂ ನಾನು ಒಳ್ಳೆ ಸ್ನೇಹಿತರು. ಅನೇಕ ವರ್ಷಗಳಿಂದ ಅವ್ರು ನನಗೆ ಗೊತ್ತು ಎಂದೂ ವಿಂಟಾ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಲು ಅಲೋಕ್ ನಿರಾಕರಿಸಿದ್ದಾರೆ. ಈಗ ಪ್ರತಿಕ್ರಿಯೆ ನೀಡಲು ಸಮಯವಲ್ಲ. ವಿಂಟಾ ಬಗ್ಗೆ ನನಗೆ ಗೊತ್ತು. ಅವ್ರ ಮೇಲಾದ ಶೋಷಣೆ ಬಗ್ಗೆ ಮಾತನಾಡಲು ಮಹಿಳೆಯರಿಗೆ ಹಕ್ಕಿದೆ. ಸಮಯ ಬಂದಾಗ ನಾನು ಉತ್ತರ ನೀಡುತ್ತೇನೆಂದು ಅಲೋಕ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...