alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಸ್ಟಾರ್ಸ್ ನಂತ್ರ ಸಪ್ನಾ ಚೌಧರಿ ನಾಗಿನ್ ಡಾನ್ಸ್ ವಿಡಿಯೋ ವೈರಲ್

ಬಿಗ್ ಬಾಸ್ ಮೂಲಕ ಮತ್ತಷ್ಟು ಜನರಿಗೆ ಪರಿಚಯವಾಗಿದ್ದ ಸಪ್ನಾ ಚೌಧರಿ ಸದ್ಯ ಮೇಕಪ್ ಹಾಗೂ ಡ್ರೆಸ್ ವಿಚಾರಕ್ಕೆ ಸದ್ದು ಮಾಡ್ತಿದ್ದಾಳೆ. ಕೆಲ ದಿನಗಳಿಂದ ಸಪ್ನಾ ಮಾಡರ್ನ್ ಡ್ರೆಸ್ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಸಪ್ನಾ ಚೌಧರಿ ತನ್ನ ಡಾನ್ಸ್ ಸ್ಟೈಲ್ ಬದಲಿಸಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಸಪ್ನಾ ನೃತ್ಯವೊಂದು ವೈರಲ್ ಆಗಿದೆ. ಬಾಲಿವುಡ್ ಹಾಡೊಂದಕ್ಕೆ ಡಾನ್ಸ್ ಮಾಡಿರುವ ಸಪ್ನಾ ನಂತ್ರ ನಾಗಿನ್ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ನೀಲಿ ಬಣ್ಣದ ಲೆಹಂಗಾದಲ್ಲಿ ಸಪ್ನಾ ಮಿಂಚಿದ್ದಾಳೆ. ಸಪ್ನಾಳ ಎರಡೂ ಡಾನ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ.

ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಸಪ್ನಾ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಳು. ಈ ಎಲ್ಲ ಡಾನ್ಸ್ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ಅಕೌಂಟ್ ಗೆ ಹಾಕಿದ್ದಾಳೆ ಡಾನ್ಸರ್. ಬಿಗ್ ಬಾಸ್ ನಿಂದ ಹೊರಬಿದ್ದ ಮೇಲೆ ಸಪ್ನಾ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡಿದ್ದಳು. ನಿಧಾನವಾಗಿ ಸ್ಟೈಲ್ ಬದಲಿಸಿಕೊಂಡು ಈಗ ಬಾಲಿವುಡ್ ಸ್ಟಾರ್ಸ್ ಗಳಿಗೆ ಟಕ್ಕರ್ ನೀಡ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...