alex Certify
ಕನ್ನಡ ದುನಿಯಾ       Mobile App
       

Kannada Duniya

ಖಡಕ್ ಅಧಿಕಾರಿಯ ಲುಕ್ ನಲ್ಲಿ ಸಲ್ಮಾನ್ ಖಾನ್

ಬಹುನಿರೀಕ್ಷಿತ ರೇಸ್-3 ಚಿತ್ರ ಕೊನೆಗೂ ಸೆಟ್ಟೇರಿದೆ. ಕಳೆದ ಎರಡು ಚಿತ್ರಗಳಲ್ಲೂ ಸೈಫ್ ಅಲಿ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದ್ರೀಗ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಮಿಂಚಲಿದ್ದಾರೆ. ಅಬ್ಬಾಸ್ ಮಸ್ತಾನ್ ಬದಲು ರೆಮೋ ಡಿಸೋಜಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸಲ್ಮಾನ್ ಖಾನ್ ರ ಬಹುತೇಕ ಸಿನೆಮಾಗಳಂತೆ ರೇಸ್-3 ಕೂಡ ಈದ್ ಸಮಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಲ್ಲುಗೆ ಜಾಕ್ವೆಲಿನ್ ಫರ್ನಾಂಡಿಸ್ ಜೋಡಿಯಾಗಿದ್ದಾಳೆ. ಡೈಸಿ ಶಾ ಮತ್ತು ಬಾಬ್ಬಿ ಡಿಯೋಲ್ ಕೂಡ ನಟಿಸುತ್ತಿದ್ದಾರೆ. ರೇಸ್-3 ಚಿತ್ರದ ಫೋಟೋ ಒಂದನ್ನು ಸಲ್ಲು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಕ್ಲೀನ್ ಶೇವ್ ಮಾಡಿಕೊಂಡು ಸಲ್ಮಾನ್ ಸಖತ್ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಲ್ಲು, ಸರ್ಕಾರಿ ತನಿಖಾಧಿಕಾರಿಯೊಬ್ಬರ ಪಾತ್ರ ಮಾಡ್ತಿದ್ದಾರೆ. ಅದಕ್ಕೆ ತಕ್ಕಂತೆ ಖಡಕ್ ಸ್ಟೈಲ್ ಕೂಡ ಈ ಫೋಟೋದಲ್ಲಿದೆ. ಇದನ್ನು ನೋಡಿದ ಅಭಿಮಾನಿಗಳು ಈಗಲೇ ಚಿತ್ರ ಬಿಡುಗಡೆಗಾಗಿ ಕಾತರರಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...