alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಜೈಲು ಪಾಲಾಗಲಿದ್ದಾರಾ ಈ ಬಾಲಿವುಡ್ ನಟ..?

sanjay-dutt-going-to-start-his-career-again-after-releasing-from-jail

ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಜೈಲು ಸೇರಿದ್ರೂ ಅಚ್ಚರಿಯಿಲ್ಲ. ಅವರಿಗೆ ವಿಧಿಸಲಾದ ಶಿಕ್ಷೆ ಅವಧಿಗಿಂತ ಅತ್ಯಂತ ಕಡಿಮೆ ದಿನಗಳ ಕಾಲ ದತ್ ಜೈಲಿನಲ್ಲಿದ್ರು. ಪದೇ ಪದೇ ಪೆರೋಲ್ ಪಡೆದು ಜೈಲಿನಿಂದ ಹೊರಬರ್ತಾ ಇದ್ರು. ಈ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರ ಸರ್ಕಾರದಿಂದ ವಿವರಣೆ ಕೇಳಿದೆ.

ಸಂಜಯ್ ದತ್ ಜೈಲಿನಲ್ಲಿ ಕಳೆದ ಅವಧಿ ತೃಪ್ತಿಕರವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ರೆ ಮತ್ತೆ ಅವರನ್ನು ಕಾರಾಗೃಹಕ್ಕೆ ತಳ್ಳುವ ಸಾಧ್ಯತೆ ಕೂಡ ಇದೆ. ದತ್ ರನ್ನು ಸನ್ನಡತೆ ಆಧಾರದ ಮೇಲೆ ಬೇಗ ಬಿಡುಗಡೆ ಮಾಡಿರಬಹುದು. ಅದು ಜೈಲಿನ ಅಧಿಕಾರಿಗಳಿಗೆ ಸಂಭಂಧಪಟ್ಟ ವಿಚಾರ ಎನ್ನುತ್ತಿದೆ ಮಹಾರಾಷ್ಟ್ರ ಸರ್ಕಾರ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಕಾನೂನು ಸಲಹೆ ಪಡೆದುಕೊಳ್ಳಲಿದೆ. ಆದ್ರೆ ಮುನ್ನಾಭಾಯಿಗೆ ಈ ಬಿಸಿ ಇನ್ನೂ ತಟ್ಟಿದಂತಿಲ್ಲ. ಸಂಜು ಬಾಬಾ ಈ ಬಗ್ಗೆ ಚರ್ಚೆ ನಡೆಸಿಲ್ವಂತೆ. ಇತ್ತೀಚೆಗಷ್ಟೆ ಪತ್ನಿ ಮಕ್ಕಳು ಹಾಲಿಡೇ ಮೂಡ್ ನಲ್ಲಿದ್ರು. ದತ್ ಕೂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಂಜಯ್ ದತ್ ರ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿರುವ ಸಂದರ್ಭದಲ್ಲೇ ಹೊಸ ವಿವಾದ ಹುಟ್ಟಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...