alex Certify
ಕನ್ನಡ ದುನಿಯಾ       Mobile App
       

Kannada Duniya

ಸುದೀಪ್ ಬಗ್ಗೆ ರಜನಿಕಾಂತ್ ಅಳಿಯ ಹೇಳಿದ್ದೇನು..?

Sudeep-Dhanush

ಸ್ಯಾಂಡಲ್ ವುಡ್ ಸ್ಟಾರ್, ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಬಿಡುಗಡೆಗೆ ಸಿದ್ಧವಾಗಿದ್ದು, ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಮುಂದಿನ ತಿಂಗಳು ಬಹು ನಿರೀಕ್ಷೆಯ ‘ಕೋಟಿಗೊಬ್ಬ-2’ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.

ಸುದೀಪ್, ನಿತ್ಯಾ ಮೆನನ್ ಅಭಿನಯಿಸಿರುವ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡಿದ್ದು, ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶಿಸಿದ್ದಾರೆ. ‘ಕೋಟಿಗೊಬ್ಬ-2’ ಕನ್ನಡದಲ್ಲಿ ಮಾತ್ರವಲ್ಲದೇ, ತಮಿಳುನಲ್ಲಿಯೂ ನಿರ್ಮಾಣವಾಗಿದೆ. ಕನ್ನಡದಲ್ಲಿ ಈಗಾಗಲೇ ಆಡಿಯೋ ರಿಲೀಸ್ ಆಗಿ ಕಮಾಲ್ ಮಾಡುತ್ತಿವೆ ತಮಿಳು ಅವತರಣಿಕೆಯ ಆಡಿಯೋ ಲಾಂಚ್ ಚೆನ್ನೈನಲ್ಲಿ ನಡೆದಿದ್ದು, ಖ್ಯಾತ ನಟ, ರಜನಿಕಾಂತ್ ಅಳಿಯ ಧನುಷ್, ಶಿವಕಾರ್ತಿಕೇಯನ್, ವಿಜಯ್ ಸೇತುಪತಿ ಮೊದಲಾದ ಕಲಾವಿದರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಧನುಷ್, ಕನ್ನಡದ ಸೂಪರ್ ಸ್ಟಾರ್ ಆಗಿರುವ ಕಿಚ್ಚ ಸುದೀಪ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಬೇಕೆಂಬ ಅಭಿಲಾಷೆ ಹೊಂದಿರುವುದಾಗಿ ಹೇಳಿದ್ದಾರೆ. ಸುದೀಪ್ ಅವರೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...