alex Certify
ಕನ್ನಡ ದುನಿಯಾ       Mobile App
       

Kannada Duniya

ತೆರೆ ಮೇಲೂ ಬೇಬಿ ಬಂಪ್ ಮುಚ್ಚಿಡೊಲ್ಲ ಕರೀನಾ..!

kareena baby bumpತಾಯ್ತನದ ಹೊಸ್ತಿಲಲ್ಲಿರುವ ನಟಿ ಕರೀನಾ ಕಪೂರ್ ತೆರೆ ಮೇಲೆ ಯಾವುದೇ ಪಾತ್ರಕ್ಕಾಗಿ ರೂಪ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಆನ್ ಸ್ಕ್ರೀನ್ ನಲ್ಲಿ ಅವರು ತಮ್ಮ ಬೇಬಿ ಬಂಪ್ ಅನ್ನು ಮುಚ್ಚಿಡೋ ಪ್ರಯತ್ನವನ್ನೂ ಮಾಡುವುದಿಲ್ಲವಂತೆ.

ಪ್ರೆಗ್ನೆನ್ಸಿಯಿಂದ ತಮ್ಮ ಕೆಲಸದ ವೇಳಾಪಟ್ಟಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ ಬೇಬೊ. ಸಾಮಾನ್ಯ ಬದುಕು ನಡೆಸಲು ನಾನು ಇಷ್ಟಪಡುತ್ತೇನೆ, ನಟನೆ ನನಗೆ ಇಷ್ಟ, ಅಮ್ಮನ ಹೊಟ್ಟೆಯಲ್ಲಿದ್ದಾಗಲೇ ನಾನು ನಟಿಯಾಗಲು ಬಯಸಿದ್ದೆ. ತಾಯ್ತನದಿಂದ ನಟನೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ, 80 ವರ್ಷವಾಗುವವರೆಗೂ ನಾನು ನಟನೆ ಮುಂದುವರಿಸುತ್ತೇನೆ ಎನ್ನುತ್ತಾರೆ ಕರೀನಾ.

ಯಾವ ಪಾತ್ರವೇ ಆದ್ರೂ ಹೇಗಿದ್ದೇನೋ ಹಾಗೇ ಕಾಣಿಸಿಕೊಳ್ಳಲು ಇಚ್ಛಿಸ್ತೇನೆ, ಗರ್ಭಿಣಿಯಾಗಿರುವ ಬಗ್ಗೆ ನನಗೆ ಸಂತೋಷವಿದೆ. ಇದರಲ್ಲಿ ಮುಚ್ಚಿಟ್ಟುಕೊಳ್ಳುವಂಥದ್ದೇನೂ ಇಲ್ಲ ಅನ್ನೋದು ಕರೀನಾ ಅಭಿಪ್ರಾಯ. ಅಕ್ಟೋಬರ್ ನಲ್ಲಿ ಕರೀನಾ ‘ವೀರ್ ದಿ ವೆಡ್ಡಿಂಗ್’ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...