alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ವಿಡಿಯೋದಲ್ಲಿರೋ ಈ ನಟಿ ಯಾರು ಗೊತ್ತಾ..?

ಹಾಡಿನ ಚಿತ್ರೀಕರಣದಲ್ಲಿ ನೃತ್ಯ ಮಾಡುತ್ತಿದ್ದ ನಟಿಯೊಬ್ಬರು ಕಾಲು ಜಾರಿ ಬಿದ್ದ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿರುವುದು ‘ಸೈರಾಟ್’ ನಾಯಕಿ ರಿಂಕು ರಾಜ್ ಗುರು ಎಂದು ಹೇಳಲಾಗಿತ್ತು. ನಂತರದಲ್ಲಿ ಅದು ನಟಿ ಕೀರ್ತಿ ಸುರೇಶ್ ಎನ್ನಲಾಗಿತ್ತಾದರೂ, ವಿಡಿಯೋದಲ್ಲಿರುವುದು ಅವರಲ್ಲ.

ನವೆಂಬರ್ 8 ರಿಂದ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ನದಿಯ ಬಳಿ ಬಂಡೆಯ ಮೇಲೆ ನೃತ್ಯ ಮಾಡುವ ಸಂದರ್ಭದಲ್ಲಿ ನಟಿ ಕಾಲು ಜಾರಿ ಆಯತಪ್ಪಿ ಬಿದ್ದಿದ್ದಾರೆ. ಅಲ್ಲಿದ್ದವರು ಅವರನ್ನು ರಕ್ಷಿಸಲು ಧಾವಿಸುತ್ತಾರೆ.

ಈ ನಟಿ ಕೀರ್ತಿ ಸುರೇಶ್ ಎಂದು ಸುದ್ದಿಯಾಗಿತ್ತು. ಖ್ಯಾತ ನಟಿ ಸಾವಿತ್ರಿ ಜೀವನಾಧಾರಿತ ‘ಮಹಾನತಿ’ ಚಿತ್ರೀಕರಣದ ಸಂದರ್ಭದಲ್ಲಿ ಕೀರ್ತಿ ಸುರೇಶ್ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

ಆದರೆ, ವಿಡಿಯೋದಲ್ಲಿರುವುದು ಕೀರ್ತಿ ಸುರೇಶ್ ಅಲ್ಲ. ಆಕೆ ಮಲಯಾಳಂ ನಟಿ ಲಿಂಡಾ ಕುಮಾರ್. ಸಿದ್ದಿಕಿ ಚೆನ್ನಮಗಳೂರು ಅವರ ಚಿತ್ರ ‘ಕುಂಜಿರಾಮತೆ ಕುಪ್ಪಾಯಮ್’ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಲಿಂದಾ ಕುಮಾರ್ ಆಯತಪ್ಪಿ ಬಿದ್ದಿದ್ದಾರೆ.

ಲಿಂದಾ ಕುಮಾರ್ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದು, ಕೊಜಿಕ್ಕೋಡ್ ಕಾಡಿನಲ್ಲಿ ಚಿತ್ರೀಕರಣದ ವೇಳೆ ಅವರು ಬಂಡೆ ಮೇಲೆ ಬಿದ್ದಿದ್ದಾರೆ. ಅವರಿಗೆ ವೈದ್ಯರು 10 ದಿನ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...