alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರೇ ತಪ್ಪದೇ ನೋಡಿ ಈ ಚಿತ್ರಗಳನ್ನು….

ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದಂತ ಪರಿಸ್ಥಿತಿ ಕೆಲವೊಮ್ಮೆ ಎದುರಾಗುತ್ತದೆ. ಆ ಸ್ಥಿತಿಯಲ್ಲಿ ಮಹಿಳೆಯರಿಗೆ ಈ ಐದು ಸಿನಿಮಾ ನೆರವಿಗೆ ಬರುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯರು ನೋಡಲೇಬೇಕಾದ ಚಿತ್ರಗಳ ಇಲ್ಲಿವೆ.

ದಿ ಡೆವಿಲ್ ವೇರ್ಸ್ ಪ್ರಾಡಾ

ದಿ ಡೆವಿಲ್ ವೇರ್ಸ್ ಪ್ರಾಡಾ ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದೆ. 2006 ರಲ್ಲಿ ಚಿತ್ರ ಬಿಡುಗಡೆಗೊಂಡಿದೆ. ಇದೊಂದು ಹುಡುಗಿಯ ಕಥೆಯಾಗಿದೆ. ವಿದ್ಯಾಭ್ಯಾಸ ಮುಗಿಸಿ ನ್ಯೂಯಾರ್ಕ್ ನ ಒಂದು ಫ್ಯಾಷನ್ ನಿಯತಕಾಲಿಕೆಯಲ್ಲಿ ಹುಡುಗಿ ಕೆಲಸ ಮಾಡ್ತಾಳೆ. ಆಕೆ ಅಲ್ಲಿ ಎದುರಿಸುವ ಸಂಘರ್ಷಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಮಿಲಿಯನ್ ಡಾಲರ್ ಬೇಬಿ

2004 ರಲ್ಲಿ ತೆರೆಗೆ ಬಂದ ಈ ಚಿತ್ರ ಕ್ರೀಡೆಗೆ ಸಂಬಂಧಿಸಿದ್ದು. ಬಾಕ್ಸರ್ ಮಹಿಳೆ ಹಾಗೂ ತರಬೇತುದಾರನ ಕಥೆ ಇದಾಗಿದೆ. ಎಂತ ಕಷ್ಟಗಳನ್ನು ಎದುರಿಸಿ ಮಹಿಳೆ ಗೆಲುವು ಸಾಧಿಸ್ತಾಳೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಎನ್ ಎಜ್ಯುಕೇಶನ್

ಎನ್ ಎಜ್ಯುಕೇಶನ್ ಹದಿಹರೆಯದ ಹುಡುಗಿಯ ಕಥೆ. 16 ನೇ ವಯಸ್ಸಿನಲ್ಲಿ ಹುಡುಗಿಯಲ್ಲಿ ಬದಲಾವಣೆಯಾದ ನಂತರ ಆಕೆ ಜೀವನದಲ್ಲಿ 35 ವರ್ಷದ ಪುರುಷನ ಪ್ರವೇಶವಾಗುತ್ತದೆ. ರೋಮ್ಯಾಂಟಿಕ್ ಹಾಗೂ ದುಃಖ ಎರಡೂ ಇರುವ ಚಿತ್ರ ಇದಾಗಿದೆ.

ಕ್ವೀನ್

ದೆಹಲಿಯಲ್ಲಿ ವಾಸಿಸುವ ರಾಣಿ ಎಂಬಾಕೆಯ ಕಥೆ. 24 ವರ್ಷದ ರಾಣಿ ಸಂಪ್ರದಾಯಸ್ಥ ಕುಟುಂಬದವಳಾಗಿರುತ್ತಾಳೆ. ಎಂದೂ ಮನೆಯಿಂದ ಹೊರ ಬಂದಿರದ ಹುಡುಗಿ ನಂತರ ನಡೆಯುವ ಸಂಘರ್ಷದ ದಾರಿಯೇ ಕ್ವೀನ್ ಚಿತ್ರ.

ಲಿಟಲ್ ಮಿಸ್ ಸನ್ ಶೈನ್

ಇದೊಂದು ಹಾಸ್ಯಭರಿತ ಚಿತ್ರವಾಗಿದೆ. ಒಂದು ಕುಟುಂಬದ ಸಂಘರ್ಷವನ್ನು ಇದು ಒಳಗೊಂಡಿದೆ. ಮಗಳು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಕುಟುಂಬದವರು ಹೇಗೆ ಹೋರಾಟ ನಡೆಸುತ್ತಾರೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...