alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಮಹಿಳೆಯರು ಮಾಡಿದ ನೃತ್ಯ ಫುಲ್ ವೈರಲ್

ಕೇಂದ್ರ ರೈಲ್ವೆ ಮಂತ್ರಿ ಪಿಯೂಶ್ ಗೋಯಲ್ ಮಹಿಳೆಯರ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗೋದಕ್ಕೆ ಕಾರಣರಾಗಿದ್ದಾರೆ. ಮುಂಬೈ ಸಬ್ ಅರ್ಬನ್ ಟ್ರೈನ್ನಲ್ಲಿ ನಿಂತುಕೊಳ್ಳೋಕೆ ಜಾಗ ಸಿಗೋದೇ ಕಷ್ಟ . ಅಂತಾದ್ರಲ್ಲಿ ಮಹಿಳೆಯರ ತಂಡ ಗಾರ್ಭಾ ನೃತ್ಯವನ್ನು ಮಾಡಿದೆ.

ಈ ದೃಶ್ಯ ಪ್ರಯಾಣಿಕರ ಮೊಬೈಲ್ನಲ್ಲಿ ಚಿತ್ರೀಕರಣಗೊಂಡಿದೆ. ಪಿಯೂಶ್ ಗೋಯಲ್ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದರಿಂದ ವಿಡಿಯೋಗೆ ಸಿಕ್ಕಾಪಟ್ಟೆ ಜನಸ್ಪಂದನೆ ವ್ಯಕ್ತವಾಗಿದೆ.

ಮಹಿಳಾ ತಂಡದ ಸದಸ್ಯರೊಬ್ಬರು ಸ್ಪೀಕರ್ ನಲ್ಲಿ ಹಾಡು ಪ್ಲೇ ಮಾಡಿದ್ದು ಆ ಹಾಡಿಗೆ ಮಹಿಳೆಯರು ನೃತ್ಯ ಮಾಡಿದ್ದಾರೆ. ಈ ವಿಡಿಯೋ ಯಾವಾಗ ಚಿತ್ರೀಕರಣ ಆಗಿದೆ ಅನ್ನೋದು ತಿಳಿದುಬಂದಿಲ್ಲ.

ಆದ್ರೆ ಪಿಯೂಶ್ ಗೋಯಲ್ ಇಂತಾ ಸೇವೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಮಾತ್ರ ಸಿಗೋಕೆ ಸಾಧ್ಯ ಎಂಬುದಾಗಿ ವಿಡಿಯೋವನ್ನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಜನ್ಸ್ ಕೂಡ ವಿಡಿಯೋಗೆ ಅಭೂತಪೂರ್ವಕವಾಗಿ ಸ್ಪಂದಿಸಿದ್ದಾರೆ. ಹಲವರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲೂ ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...