alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿಯಲ್ಲಿ ಬ್ರೆಡ್ ಮಾರುತ್ತಿದ್ದ ಯುವತಿ ಟಾಪ್ ಮಾಡೆಲ್ ಆಗಿದ್ಹೇಗೆ?

ಒಲಾಜುಮೋಕ್ ಒರಿಸ್ಸಾಗುನಾ ನೈಜೀರಿಯಾದ ಯುವತಿ. 27ರ ಹರೆಯದ ಈಕೆ ಲಾಗೋಸ್ ನಗರದಲ್ಲಿ ಬ್ರೆಡ್ ಮಾರಿ ಬದುಕು ಸಾಗಿಸ್ತಾ ಇದ್ಲು. ಆದ್ರೀಗ ನೈಜೀರಿಯಾದ ಟಾಪ್ ಮಾಡೆಲ್ ಎನಿಸಿಕೊಂಡಿದ್ದಾಳೆ. ಇವಳ ಬದುಕು ಅನಿರೀಕ್ಷಿತವಾಗಿ ಬದಲಾಗಿದೆ.

ಟೈನಿ ಟೆಂಪಾ ಅನ್ನೋ ರಾಕ್ ಸಾಂಗ್ ಗಾಗಿ ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಟಿ ಬೆಲ್ಲೋ ಈ ಹಾಡಿಗಾಗಿ ನೂರಾರು ಫೋಟೋ ಕ್ಲಿಕ್ಕಿಸಿದ್ದ. ಒಂದು ಫೋಟೋದಲ್ಲಿ ಒಲಾಜುಮೋಕ್ ಕೂಡ ಕಾಣಿಸಿಕೊಂಡಿದ್ಲು. ಆಕೆ ಯಾರು ಅನ್ನೋದು ಟಿ ಬೆಲ್ಲೋಗೆ ಗೊತ್ತಿರಲಿಲ್ಲ.

ಅವಳನ್ನು ಪತ್ತೆ ಮಾಡ್ಬೇಕು ಅಂತಾನೇ ಆ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದ. ಆಕೆ ಬ್ರೆಡ್ ಮಾರುವ ಬಡ ಹುಡುಗಿ ಅನ್ನೋದು ಯಾರೊಬ್ಬರಿಗೂ ಗೊತ್ತಾಗಿರಲಿಲ್ಲ. ಒಲಾಜುಮೋಕ್ ಒಬ್ಬ ರೂಪದರ್ಶಿ ಅಂತಾನೇ ಎಲ್ಲರೂ ಭಾವಿಸಿದ್ರು.

ಆ ಒಂದೇ ಒಂದು ಫೋಟೋ ಯುವತಿಯ ಬದುಕಲ್ಲಿ ಹೊಸ ತಿರುವು ತಂದಿತ್ತು. ಅದಾಗಿ ಒಂದೇ ವರ್ಷದಲ್ಲಿ ಒಲಾಜುಮೋಕ್ ಜನಪ್ರಿಯ ಮಾಡೆಲ್ ಎನಿಸಿಕೊಂಡ್ಲು. ಹತ್ತಾರು ಆಫರ್ ಗಳು ಅವಳನ್ನು ಹುಡುಕಿಕೊಂಡು ಬಂದ್ವು. ದಿನಕ್ಕೆ 20 ಡಾಲರ್ ದುಡಿಯುತ್ತಿದ್ದ ಯುವತಿ ಈಗ ಕೈತುಂಬಾ ಸಂಪಾದಿಸುತ್ತಿದ್ದಾಳೆ.

ಒಲಾಜುಮೋಕ್ ಗೆ ಮದುವೆಯಾಗಿದೆ. ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಆಕೆ ಬ್ರೆಡ್ ಮಾರ್ತಾ ಇದ್ಲು. ಆದ್ರೀಗ ವಿವಿಧ ಸಂಘ- ಸಂಸ್ಥೆಗಳು ಮಕ್ಕಳ ಶಿಕ್ಷಣದ ಜವಾಬ್ಧಾರಿ ಹೊರಲು ತುದಿಗಾಲಲ್ಲಿ ನಿಂತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...